hubbali

ಹುಬ್ಬಳ್ಳಿ: ಜಗಳದಲ್ಲಿ ತಾಯಿ ಕೊಲೆ ಮಾಡಿದ ಪಾಪಿ ಮಗ

Share

ಹುಬ್ಬಳ್ಳಿಯಲ್ಲಿ ಹೆತ್ತ ತಾಯಿಯನ್ನು ಕೊಲೆ ಮಾಡಿದ ಕೀಚಕ ಮಗ. ಕಳೆದ ಮದ್ಯೆ ರಾತ್ರಿ ಹುಬ್ಬಳ್ಳಿಯ ತೊರವಿಹಕ್ಕಲ ಏರಿಯಾದಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ ನಡೆದಿದ್ದು ಅಣ್ಣ ತಮ್ಮಂದಿರ ಜಗಳದಲ್ಲಿ ಹೆತ್ತ ತಾಯಿಯನ್ನೇ ಮಗ ಕೊಲೆ ಮಾಡಿರುವ ಘಟನೆ ನಡೆದಿದೆ.

ಗಂಡ ಹೆಂಡತಿ ಮಕ್ಕಳು ಜಗಳ ಮಾಡುವ ಸಂದರ್ಭದಲ್ಲಿ ಗಾಜಿನ ಚೂರುಗಳಿಂದ ಮಗ ಹಲ್ಲೆ ಮಾಡಿದ್ದು. ಹೊಟ್ಟೆ ಎದೆ ಹಾಗೂ ಕಿಬ್ಬುಟ್ಟಗಳಿಗೆ ಗಾಯವಾಗಿ ಸಾವನ್ನಪ್ಪಿರುವ ಮಹಿಳೆ. ಪದ್ಮಾ ಚಲ್ಲಗೇರಿ (53) ಮಗ ಮಂಜು ಚಲ್ಲಗೇರಿ ಕೊಲೆ ಮಾಡಿದ್ದಾನೆ.

ನಿನ್ನೆ ರಾತ್ರಿ ಗಾಯಗೊಂಡ ವೇಳೆ ಆಸ್ಪತ್ರೆಗೆ ದಾಖಲಿಸಿದ್ದ ಇನ್ನೊಬ್ಬ ಮಗ ಲಕ್ಷಣ ಹಾಗೂ ಪತಿ ಶ್ರೀನಿವಾಸ. ಸದ್ಯ ಪೊಲೀಸರಿಂದ ಕೊಲೆಗೆ ಸಹಕಾರ ಮಾಡಿದ್ದಾರೆಂದು ಆರೋಪಿಸಿ ಪತಿ ಹಾಗೂ ಇನ್ನೊಬ್ಬ ಮಗನ ಮೇಲೂ ಕಮರಿಪೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕಿಮ್ಸ ಹಾಗೂ ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಬೆಟಿನೀಡಿದ್ದಾರೆ.

 

Tags:

error: Content is protected !!