ಪೆಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಮಂಗಳವಾರ ತಡರಾತ್ರಿ ಭಾರತೀಯ ಯೋಧರು, ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ 9ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ ಉಗ್ರರ ಅಡಗುತಾಣ ಹಾಗೂ ಅನೇಕ ಉಗ್ರರನ್ನು ಸೆದೆಬಡೆದಿರುವು ದಿಟ್ಟ ಹೆಜ್ಜೆ ಹಿನ್ನಲೆಯಲ್ಲಿ, ಧಾರವಾಡದಲ್ಲಿ ಮಾಜಿ ಸೈನಿಕರು ವಿಜಯೋತ್ಸ ನಡೆಸಿದರು.

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಬಳಿಯ ಕಾರ್ಗಿಲ್ ಸ್ತೂಪದ ಎದುರು ಭಾರತದ ರಾಷ್ಟ್ರಧ್ವಜ ಹಿಡಿದು ಮಾಜಿ ಸೈನಿಕರು, ಭಾರತದ ಪರ ಜಯ ಘೋಷಗಳೊಂದಿಗೆ ಪಾಪಿ ಪಾಕಿಸ್ತಾನ ವಿರುದ್ಧ ಘೋಷಣೆ ಪಾಕಿಸ್ತಾನ್ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಹಾಕಿ ಭಾರತೀಯ ಸೈನಿಕರೇ ನೀವು ಮುನ್ನುಗ್ಗಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭಾರತೀಯ ಸೈನಿಕರಿಗೆ ಧೈರ್ಯ ತುಂಬಿದರು. 60-65 ವರ್ಷಗಳಾಗಿರುವ ಈ ಮಾಜಿ ಯೋಧರು ನಾವು ಈಗಲೂ ಯುದ್ಧಕ್ಕೆ ಕರೆದರೆ ಹೋಗಲು ಸಿದ್ಧರಿದ್ದೇವೆ ಎನ್ನುವ ಮೂಲಕ ತಮ್ಮ ಹುಮ್ಮಸ್ಸನ್ನು ಮಾಜಿ ಯೋಧರು ಹೊರ ಹಾಕಿದರು.
