ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಬ್ಬೂರ ಪಟ್ಟಣದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ವಿವಿಧ ಫಲಾನುಭವಿಗಳಿಗೆ ಯೋಜನೆಗಳನ್ನು ವಿತರಿಸಿದರು.
ಸನ್ 2024-25ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನ 22.50 ಲಕ್ಷ ರೂಪಾಯಿಯಡಿ ಕಬ್ಬೂರ ಪಟ್ಟಣ ಪಂಚಾಯತಿಯ ಕಛೇರಿ ನಿರ್ಮಾಣ, ಸನ್ 2022-23ನೇ ಸಾಲಿನ 15ನೇ ಹಣಕಾಸು ಉಳಿತಾಯವಾದ 22.50 ಲಕ್ಷಅನುದಾನದಡಿ ಕಬ್ಬೂರ ಪಟ್ಟಣ ಪಂಚಾಯತ ವ್ಯಾಪ್ತಿಯ ಬಾಗೇವಾಡಿ ರಸ್ತೆಗೆ ಬಸ್ ತಂಗುದಾನ ನಿರ್ಮಾಣ ಮತ್ತು ಸನ್ 2024-25ನೇ ಸಾಲಿನ ಎಸ್.ಎಫ್.ಸಿ ಶೇ 5% 6.90 ಲಕ್ಷ. ಅನುದಾನದಡಿ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಸನ್ 2024-25ನೇ ಸಾಲಿನ ಎಸ್.ಎಫ್.ಸಿ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಶೇ 24.10 % & ಶೇ 7.25% ಇತರೆ ಜನಾಂಗದ ಅನುದಾನ 4.96 ಲಕ್ಷದಡಿ ಹೋಲಿಗೆ ಯಂತ್ರಗಳ ವಿತರಣೆಯನ್ನು ಮಾಡಲಾಯಿತು. ಈ ವೇಳೆ ಶಾಸಕರಾದ ದುರ್ಯೋಧನ ಐಹೊಳೆ,ಮುಖಂಡರಾದ ಮಹಾವೀರ ಮೋಹಿತೆ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
Chikkodi
ಕಬ್ಬೂರಿನಲ್ಲಿ ಅಭಿವೃದ್ಧಿ ಪರ್ವ…
