ಇತ್ತಿಚಿನ ದಿನಗಳಲ್ಲಿ ಜನ್ಮದಿನ ಬಂತು ಅಂದ್ರೆ ಸಾಕು ಪಾರ್ಟಿ, ಪ್ರವಾಸ ಅಂತೆಲ್ಲ ಹಣವನ್ನು ವ್ಯರ್ಥ ಮಾಡುವವರನ್ನು ನೋಡಿದ್ದೇವೆ, ಆದರೆ ಇಲ್ಲೊಬ್ಬರು ತನ್ನ ತಂದೆಯ ಜನ್ಮದಿನಕ್ಕೆ ತಾನು ಕೂಡಿಟ್ಟ ಹಣದಲ್ಲಿ ಹೆಲ್ಮೆಟ್ ಕೊಡಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಹೌದು, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಆಲಿಯಾ ನದಾಫ್ ಎಂಬಾಕೆಯೇ ತನ್ನ ತಂದೆಗೆ ಹೆಲ್ಮೆಟ್ ಕೊಡಿಸಿದ್ದಾಳೆ. ತಂದೆ ಲಾಲ್ ಸಾಬ್ ಅಪ್ಪಣ್ಣ ಅವರ ಜನ್ಮದಿನ ಮೇ.30 ರಂದು ಇತ್ತು, ಹೀಗಾಗಿ ತಂದೆ ಹೆಲ್ಮೆಟ್ ಇಲ್ಲದೇ ವಾಹನ ಸಂಚಾರ ಮಾಡುವುದನ್ನು ಗಮನಿಸಿದ್ದಾಳೆ. ಹೀಗಾಗಿ ತಂದೆಯ ರಕ್ಷಣೆಯ ಹಿನ್ನೆಲೆಯಲ್ಲಿ ತಂದೆಯ ಜನ್ಮದಿನದ ದಿನವೇ ತಾನು ಕೂಡಿಟ್ಟ ಹಣದಲ್ಲಿ ಹೆಲ್ಮೆಟ್ ಕೊಡಿಸಿದ್ದಾರೆ. ಅಲ್ಲದೇ ಸಂಚಾರದ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ತಂದೆಗೆ ತಿಳಿಸಿದ್ದಾಳೆ.

ಇನ್ನು ತಂದೆ ಲಾಲ್ ನದಾಫ್ ಮಗಳ ಕಾರ್ಯವನ್ನು ಮೆಚ್ಚಿಕೊಂಡಿದ್ದು, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರ ಮಾಡುವ ಷಪತ್ತವನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಆಧುನಿಕ ದಿನಮಾನಗಳಲ್ಲಿ ಕೈಯಲ್ಲಿ ಹಣವಿದ್ದರೇ ಸಾಕು ಶೋಕಿ, ಗಿಕಿ ಅಂತೆಲ್ಲ ಹಣವನ್ನು ಖರ್ಚು ಮಾಡುವವರ ನಡುವೆ ಆಲಿಯಾ ತನ್ನ ತಂದೆಗೆ ಹೆಲ್ಮೆಟ್ ಕೊಡಿಸಿ ಸಾಮಾಜಿಕ ಸಂದೇಶವನ್ನು ಸಾರಿದ್ದು, ಸಾರ್ವಜನಿಕರು ಆಲಿಯಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.