Accident

ಕ್ಯಾಂಟರ್-ಬೈಕ್ ಅಪಘಾತ…ಮೂವರು ಬಾಲಕರ ಘೋರ ಸಾವು…

Share

ಆ ಮೂವರು ಹೈಸ್ಕೂಲ್ ವಿದ್ಯಾರ್ಥಿಗಳು. ಗ್ರಾಮದಲ್ಲಿ ನಡೆಯುತ್ತಿದ್ದ ಹನುಮ ದೇವನ ಮೂರ್ತಿ ಮೇರವಣಿಗೆ ನೋಡಲು ಬೈಕ್ ಮೇಲೆ ತೆರಳಿದ್ರು.ಒಂದೇ ಬೈಕ್ ಮೇಲೆ ಹೋದ ಮೂವರು ಭೀಕರ ಅಪಘಾತಕ್ಕೆ ಬಲಿಯಾಗಿ ಮಸನ ಸೇರಿದ್ದಾರೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ…

ಒಂದೆಡೆ ಗ್ರಾಮದ ರಸ್ತೆಯಲ್ಲಿ ನಡೆಯಿತ್ತಿರೋ ಹನುಮ ದೇವರ ಮೆರವಣಿಗೆ. ಮತ್ತೊಂದೆಡೆ ಮೆರವಣಿಗೆ ನೋಡಲು ಹೋದವ್ರು ಅಪಘಾತಕ್ಕೆ ಬಲಿಯಾಗಿ ಬಿದ್ದ ರಕ್ತಸಿಕ್ತ ಶವಗಳು. ಇಂತಹ ದಾರುಣ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಸೀಮಿಕೇರಿ ಬೈಪಾಸ್ ರಸ್ತೆಯಲ್ಲಿ.ಹೌದು ಮುರುನಾಳ ಗ್ರಾಮದ ಸಿದ್ದು(೧೬),ಸಂತೋಷ್(೧೬),ಕಾಮಣ್ಣ(೧೬) ಮೂವರು ವೀರಾಪೂರ ಬಾಲಕರು. ಗ್ರಾಮದಲ್ಲಿನ ಹನುಮ ದೇವರ ಮೆರವಣಿಗೆ ನೋಡಲು ಒಂದೇ ಬೈಕ್ ಮೇಲೆ ಬಂದಿದ್ರು.ವಿಧಿಯಾಟ ಕ್ಯಾಂಟರ್ ಗೆ ಡಿಕ್ಕಿ ಹೊಡೆದು, ಕ್ಯಾಂಟರ್ ಮೇಲೆ ಹರಿದ ಪರಿಣಾಮ ಸ್ಥಳದಲ್ಲೆ ಸಾವನಪ್ಪಿದ್ದಾರೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪ್ರಕರಣದ ಪರಿಶೀಲನೆ ನಡೆಸಿದ್ರು…

ಇನ್ನು ಬಾಗಲಕೋಟೆ – ಸೀಮಿ ಕೇರಿ ಬೈಪಾಸ್ ರಸ್ತೆಯಲ್ಲಿ ನಡೆದ ಮನ ಕಲಕುವ ಘಟನೆಯಿಂದ ಮೃತ ಬಾಲಕರ ಮನೆಗಳಲ್ಲಿ ಮುಗಿಲು ಮುಟ್ಟಿದೆ ಆಕ್ರಂಧನ.ರಸ್ತೆ ಅಪಘಾತದಲ್ಲಿ ಚಿಕ್ಕ ವಯಸ್ಸಿನ ಮಕ್ಕಳು ಸ್ಥಳದಲ್ಲೆ ಸಾವನ್ನಪ್ಪಿರೋ ಘಟನೆ ಸ್ಥಳದಲ್ಲಿ ನೆರೆದ ಜನ್ರ ಮನ ಕಲುವಂತಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಲಾದಗಿ ಪೊಲೀಸರು ಪರಿಶೀಲನೆ ನಡೆಸಿದ್ರು, ಪ್ರಕರಣ ಕೂಡ ಕಲಾದಗಿ ಠಾಣೆಯಲ್ಲಿ ದಾಖಲಾಗಿದೆ. ಮಕ್ಕಳ ಸಾವು ಮೃತರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ…

ಒಟ್ಟಿನಲ್ಲಿ ಶಾಲೆ ರಜೆಯಲ್ಲಿ ಗೆಳೆಯರ ಜೊತೆ ಆಟವಾಡುತ್ತ ಓಡಾಡಿಕೊಂಡಿದ್ದ ಚಿಕ್ಕ ಮಕ್ಕಳ ಬದುಕಿಗೆ ಜವರಾಯ ಬ್ರೇಕ್ ಹಾಕಿದ್ದು,ವಿಧಿಯಾಟಕ್ಕೆ ಮುರುನಾಳ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಂತೂ ಸುಳ್ಳಲ್ಲ…

Tags:

error: Content is protected !!