Banglore

ಕರ್ನಲ್ ಖುರೇಷಿ ವಿರುದ್ಧ ಬಿಜೆಪಿ ಮುಖಂಡನ ಹೇಳಿಕೆಯಿಂದ ಇಡೀ ದೇಶಕ್ಕೆ ಅಪಮಾನ…

Share

ಬಿಜೆಪಿ ಮುಖಂಡನ ಹೇಳಿಕೆ ಕರ್ನಲ್ ಖುರೇಷಿ ಅವರಿಗಷ್ಟೆ ಅವಮಾನದಂತೆ ಅಲ್ಲ. ಇಡೀ ದೇಶಕ್ಕೆ ಅವಮಾನ ಮಾಡಿದಂತೆ. ಇಂತಹ ಕೀಳು ಮನಸ್ಸು ಯಾರಿಗೂ ಬರಬಾರದು. ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಬೆಳಗಾವಿ ಎಸ್ಪಿಗೆ ಸೂಚನೆ ನೀಡಿದ್ದೇನೆಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಲ್ ಸೋಫಿಯಾ ಖುರೇಷಿ ಅವರು ಬೆಳಗಾವಿಯ ಸೊಸೆ. ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರ ವಿರುದ್ಧ ಎಫ್‌ಐಆರ್ ಮಾಡಿಕೊಂಡು, ಕ್ರಮ ತೆಗೆದುಕೊಳ್ಳುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ತಿಳಿಸುವಂತೆ ಬೆಳಗಾವಿ ಎಸ್‌ಪಿ ಅವರಿಗೆ ಸೂಚಿಸಿದ್ದೇನೆ. ಬಿಜೆಪಿ ಮುಖಂಡನ ಹೇಳಿಕೆ ಕರ್ನಲ್ ಖುರೇಷಿ ಅವರಿಗಷ್ಟೆ ಅವಮಾನದಂತೆ ಅಲ್ಲ. ಇಡೀ ದೇಶಕ್ಕೆ ಅವಮಾನ ಮಾಡಿದಂತೆ. ಇಂತಹ ಕೀಳು ಮನಸ್ಸು ಯಾರಿಗೂ ಬರಬಾರದು’ ಎಂದರು.

ಇನ್ನು ‘ರಾಜ್ಯಕ್ಕೆ ಬರಬೇಕಾದ ಅನುದಾನ ಬಿಡುಗಡೆ ಮಾಡುವಂತೆ ಎರಡು ವರ್ಷದಿಂದ ಕೇಂದ್ರ ಸರ್ಕಾರಕ್ಕೆ ಕೇಳುತ್ತಿದ್ದೇವೆ. ಅನೇಕ ಕಾರಣಗಳಿಂದ ನಿಧಾನವಾಗುತ್ತಿದೆ. ಕೆಲವು ಸಂದರ್ಭದಲ್ಲಿ ಬರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಹಣ ಬಿಡುಗಡೆ ಮಾಡಿಸುವಂತೆ ರಾಜ್ಯದ ಸಂಸದರಿಗೆ ಮನವಿ ಮಾಡಿದ್ದಾರೆ’ ಎಂದರು.’ಕೇಂದ್ರದಿಂದ ರಾಜ್ಯಕ್ಕೆ 75,500 ಕೋಟಿ ತಕ್ಷಣ ಬರಬೇಕು. ರಾಜ್ಯ ಮತ್ತು ಕೇಂದ್ರದ ನಡುವೆ ಇರುವ ಸಂಬಂಧದ ನಿಯಮಗಳನ್ನು ಆಧರಿಸಿ ಒತ್ತಾಯ ಮಾಡಬೇಕಾಗುತ್ತದೆ. ಕೊನೆಯ ಬಾರಿ ಕೇಂದ್ರ ಸರ್ಕಾರಕ್ಕೆ ಒಪ್ಪಾಯಿಸಿ, ದೆಹಲಿ ಪ್ರತಿಭಟನೆ ನಡೆಸಲಾಯಿತು. ನಮಗೆ ಬರಬೇಕಾದ ಅನುದಾನ ಮಂಜೂರು ಮಾಡಿದರೆ, ನಾವೇಕೆ ಒತ್ತಾಯಿಸುತ್ತೇವೆ ಎಂದರು.

ನಿನ್ನ ನಡೆದ ಸಭೆಗೆ ಸಂಸದರು ಯಾವ ಕಾರಣಕ್ಕಾಗಿ ಬಂದಿಲ್ಲವೋ ಅವರಿಗೆ ಗೊತ್ತಿರುತ್ತದೆ. ಕೆಲಸ- ಕಾರ್ಯಗಳಿರುವುದರಿಂದ ಬಂದಿರಲಿಕ್ಕಿಲ್ಲ. ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿಯವರ ವತಿಯಿಂದ ಸಂಸದರಿಗೆ ಏನು ಗೌರವ ಕೊಡಬೇಕು ಕೊಟ್ಟಿದ್ದೇವೆ. ಇದರಲ್ಲಿ ಎರಡು ಮಾತಿಲ್ಲ. ಯಾವ ಕಾರಣಕ್ಕಾಗಿ ಸಭೆಗೆ ಬಂದಿಲ್ಲ ಎಂಬುದು ನಮಗೆ ಗೊತ್ತಿಲ್ಲ’ ಎಂದು ಹೇಳಿದರು.

Tags:

error: Content is protected !!