ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಮತ್ತು ಪತ್ತೆ ಮಾಡಲು ವಿಶೇಷ ವಿಂಗ್ ಸ್ಥಾಪಿಸಲಾಗುವುದು. ಮೃತ ಫಾಜಿಲ್ ಕುಟುಂಬಕ್ಕೆ ಕೊಟ್ಟಿದ ಪರಿಹಾರ ಹಣದ ದುರ್ಬಳಕೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದೆಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಜಿಲ್ಲೆಯ ಹಾನಗಲ್ ತಾಲೂಕು ಅಕ್ಕಿ ಆಲೂರಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮೃತ ಫಾಜಿಲ್ ಕುಟುಂಬಕ್ಕೆ ಕೊಟ್ಟಿದ್ದ ಪರಿಹಾರದ ಹಣದ ದುರ್ಬಳಕೆಯಾಗಿದೆ. ಇದೇ ಹಣವನ್ನು ಸುಹಾಸ್ ಶೆಟ್ಟಿ ಕೊಲೆಗೆ ಸುಪಾರಿ ನೀಡಿರುವ ಆರೋಪ ಕೇಳಿ ಬಂದಿದ್ದು, ನಿನ್ನೆ ದಿನೇಶ್ ಗುಂಡೂರಾವ್, ಗೃಹ ಮಂತ್ರಿಗಳು ಮಂಗಳೂರಿಗೆ ಹೋಗಿದ್ದರು. ಅವರ ಜೊತೆ ಮಾತನಾಡಿ ಹೇಳುವೆ ಎಂದು ತಿಳಿಸಿದರು. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಲು ಮತ್ತು ಪತ್ತೆ ಮಾಡಲು ವಿಶೇಷ ವಿಂಗ್ ಬೇಕಾಗುತ್ತದೆ. ಈ ಕುರಿತಂತೆ ಗೃಹ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.