Uncategorized

ವಿಜಯೇಂದ್ರ ವಿಜಯಪುರಕ್ಕೆ ಬರಲಿ ಎಂದು ಸವಾಲು ಹಾಕಿದ್ದ ಶಾಸಕ ಯತ್ನಾಳ ಸೈಲೆಂಟ್: ಜನಾಕ್ರೋಶ ಯಾತ್ರೆಗೆ ಟಾಂಗ್ ನೀಡಿದ ಯತ್ನಾಳ ಬೆಂಬಲಿಗರು

Share

ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕ್ಷೇತ್ರದಲ್ಲೇ ಬಿಜೆಪಿ ಶಕ್ತಿ ಪ್ರದರ್ಶನ ಮಾಡಿದೆ. ನೀರಿಕ್ಷೆಗಿಂತಲೂ ಹೆಚ್ಚು ಜನ ಸೇರಿಸುವ ಮೂಲಕ ಜನಾಕ್ರೋಶ ಯಾತ್ರೆ ಯಶಸ್ವಿಗೊಳಿಸಲಾಗಿದೆ. ಇತ್ತ ಯತ್ನಾಳ ಬೆಂಬಲಿಗರು ಮಾತ್ರ ಜನಾಕ್ರೋಶ ಯಾತ್ರೆಯಲ್ಲಿ ಜನರೇ ಇಲ್ಲಾ ಎನ್ನುವ ವಿಡಿಯೋ ಪೊಟೊ ಷೇರ್ ಮಾಡುವ ಮೂಲಕ ಬಿಜೆಪಿ ಜನಾಕ್ರೋಶ ಯಾತ್ರೆಗೆ ಟಾಂಗ್ ನೀಡಿದ್ದಾರೆ. ಇನ್ನೂ ಶಾಸಕ ಯತ್ನಾಳ ವಿಜಯೇಂದ್ರ ವಿಜಯಪುರಕ್ಕೆ ಬರಲಿ ಎಂದು ವೈಲಂಟ್ ಆಗಿ ಸವಾಲು ಹಾಕಿದ್ದರು. ಆದ್ರೆ ಜನಾಕ್ರೋಶ ಯಾತ್ರೆಯಲ್ಲಿ ಯತ್ನಾಳ ಹಾಗೂ ಬೆಂಬಲಿಗರು ಸೈಲೆಂಟ್ ಆಗಿದ್ದರು. ಯಾವದೇ ರೀತಿಯ ಗೊಂದಲ ಸೃಷ್ಟಿಸದೇ ಯಾತ್ರೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇತ್ತ ಸೋಶಿಯಲ್ ಮಿಡಿಯಾದಲ್ಲಿ ಬಿಜೆಪಿ ಬೆಂಬಲಿಗರು ಹಾಗೂ ಯತ್ನಾಳ ಬೆಂಬಲಿಗರ ಪೊಸ್ಟ್ ವಾರ್ ನಡೆಯುತ್ತಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಬಿಜೆಪಿ ಉಚ್ಚಾಟಿತ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕ್ಷೇತ್ರದಲ್ಲೇ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ನಡೆಸಿದೆ. ಯತ್ನಾಳ ಕ್ಷೇತ್ರದಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದೆ. ಸಂಸದರು, ಶಾಸಕರು ಹಾಗೂ ಮುಖಂಡರು ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿಸಿದ್ದಾರೆ. ಇನ್ನೂ ವಿಜಯಪುರ ನಗರದಲ್ಲಿ ಅತಿ ಹೆಚ್ಚು ಜನರನ್ನು ಸೇರಿಸುವ ಮೂಲಕ ಜಿಲ್ಲೆಯಲ್ಲಿ ಪಕ್ಷದ ಶಕ್ತಿ ಕುಂದಿಲ್ಲಾ ಎನ್ನುವ ಸಂದೇಶ ರವಾನಿಸುವ ಕಾರ್ಯ ಮಾಡಿದ್ದಾರೆ. ಯತ್ನಾಳ ವಿರೋಧಿಗಳು ವಿಜಯೇಂದ್ರಗೆ ಅದ್ದೂರಿ ಸ್ವಾಗತ ಕೋರುವ ಮೂಲಕ ಯತ್ನಾಳರಿಗೆ ಪಕ್ಷವೇ ಮೊದಲು ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ.

ಇನ್ನೂ ಈ ಜನಾಕ್ರೋಶ ಯಾತ್ರೆ ಸೋಶಿಯಲ್ ಮಿಡಿಯಾದಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಯತ್ನಾಳ ಬೆಂಬಲಿಗರು ಜನರೇ ಸೇರಿಲ್ಲಾ ಎನ್ನುವ ವಿಡಿಯೋ ಹಾಗೂ ಪೊಟೊ ಷೇರ್ ಮಾಡಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಮೈಂದರ್ಗಿ ಗ್ರಾಮದಲ್ಲಿ ನಡೆದ ಹಿಂದೂ ವಿರಾಟ್ ಸಭಾದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಗವಹಿಸಿ ಮಾತನಾಡಿರುವ ವಿಡಿಯೋ ಷೇರ್ ಮಾಡೊ ಮೂಲಕ ಜನಾಕ್ರೋಶ ಯಾತ್ರೆಗಿಂತಲೂ ಜನ ಜಾಸ್ತಿ ಸೇರಿದ್ದರು. ಇದು ಯತ್ನಾಳ ಜನಪ್ರಿಯತೆ ಎನ್ನುವ ಪೊಸ್ಟ್ ಮಾಡಿದ್ದಾರೆ. ಇದಕ್ಕೆ ಟಾಂಗ್ ಎನ್ನುವಂತೆ ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ಜನ ಸೇರಿಲ್ಲಾ ಅನ್ನೋ ಆತ್ಮಗಳಿಗೆ ಎಂದು ಪೊಟೊ ಹಾಗೂ ವಿಡಿಯೋ ಷೇರ್ ಮಾಡಿ ಯತ್ನಾಳ ಬೆಂಬಲಿಗರಿಗೆ ತಿರುಗೇಟು ನೀಡಿದ್ದಾರೆ.

ಇನ್ನೂ ಜನಾಕ್ರೋಶ ಯಾತ್ರೆಯಲ್ಲಿ ಯತ್ನಾಳ ಬೆಂಬಲಿಗರ ಆಕ್ರೋಶ ವ್ಯಕ್ತವಾಗಲಿದೆ ಎನ್ನಲಾಗಿತ್ತು. ಕಾರಣ ಶಾಸಕ ಯತ್ನಾಳ ಈ ಹಿಂದೆ ವಿಜಯೇಂದ್ರ ವಿಜಯಪುರಕ್ಕೆ ಬರಲಿ ಎಂದು ಸವಾಲು ಹಾಕಿದ್ದರು. ಬಳಿಕ ಶಾಸಕ ಯತ್ನಾಳ ಉಚ್ಚಾಟನೆ ಬಳಿಕ ವಿಜಯೇಂದ್ರ ವಿರುದ್ಧ ಆಕ್ರೋಶ ಹೆಚ್ಚಾಗಿತ್ತು. ಜನಾಕ್ರೋಶ ಯಾತ್ರೆಯಲ್ಲಿ ಊಹಾಪೋಹಗಳು ಕೇಳಿ ಬಂದಿದ್ದವು.‌ಆದ್ರೆ ಯತ್ನಾಳ ಬೆಂಬಲಿಗರು ಮಾತ್ರ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವದಿಲ್ಲಾ ಎಂದು ಹೇಳಿಕೆ ನೀಡಿದ್ದರು. ಅದರಂತೆ ನಡೆದುಕೊಂಡು ಇದ್ದಾರೆ. ಅಂದು ವೈಲಂಟ್ ಆಗಿದ್ದ ಶಾಸಕ ಯತ್ನಾಳ ಸೈಲೆಂಟ್ ಆಗಲು ಕಾರಣಗಳನ್ನು ರಾಜಕೀಯ ವಿಮರ್ಶಕರು ಕೆಲ ಕಾರಣಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಮೊದಲನೆಯದಾಗಿ ಯತ್ನಾಳ ಹೋರಾಟ ಕುಟುಂಬದ ವಿರುದ್ಧ ಇದ್ದು ಪಕ್ಷದ ವಿರುದ್ಧ ವಲ್ಲಾ, ಬಿಜೆಪಿ ಪಕ್ಷ ಉಚ್ಚಾಟನೆ ಮಾಡಿದ್ದರೂ

ಈ ಹಿಂದೆ ಎರಡು ಬಾರಿ ವಾಪಸ್ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂಬ ಆಶಾಭಾವ ಯತ್ನಾಳರಲ್ಲಿ ಹಾಗೂ ಅವರ ಬೆಂಬಲಿಗರಲ್ಲಿದೆ. ಇನ್ನೂ ಜನಾಕ್ರೋಶ ಯಾತ್ರೆಗೆ ಅಡ್ಡಿಪಡಿಸಿದರೆ ಪಕ್ಷದ ಬಾಗಿಲು ಖಾಯಂ ಬಂದ್ ಆಗುವ ಸಾಧ್ಯತೆಗಳಿದ್ದವು. ಹೀಗಾಗಿ ಯತ್ನಾಳ ಬೆಂಬಲಿಗರು ಯಾವುದೇ ರೀತಿಯ ಅಡ್ಡಿಪಡಿಸುವ ಗೋಜಿಗೆ ಹೋಗಲಿಲ್ಲ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಶಾಸಕ ಯತ್ನಾಳ ಜನಪ್ರಿಯತೆ ನೆರೆಯ ಮಹಾರಾಷ್ಟ್ರ ದಲ್ಲೂ ಇದೆ ಎನ್ನುವ ವಿಡಿಯೋ ಷೇರ್ ಮಾಡೊ ಮೂಲಕ ಟಾಂಗ್ ನೀಡಿದ್ದಾರೆ. ಇನ್ನೊಂದು ವಿಷಯ ಎಂದ್ರೆ ಮಹಾನಗರ ಪಾಲಿಕೆ ಸದಸ್ಯರು ಶಾಸಕ ಯತ್ನಾಳ ಜೊತೆಗೆ ಗುರ್ತಿಸಿಕೊಂಡಿದ್ದ ಕೆಲ ಸದಸ್ಯರನ್ನು ಬಿಟ್ಟರೇ ಉಳಿದ ಸದಸ್ಯರು ಜನಾಕ್ರೋಶ ಯಾತ್ರೆಯಲ್ಲಿ ಮಿಂಚುತ್ತಿದ್ದರು.

ಒಟ್ನಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಿದೆ. ಶಾಸಕ ಯತ್ನಾಳ ಇಲ್ಲದೇ ಇರುವದು ನಗರದ ಜನತೆ ಜನಾಕ್ರೋಶ ಯಾತ್ರೆಯಲ್ಲಿ ಅಷ್ಡಾಗಿ ಕಾಣಿಸಿಕೊಂಡಿಲ್ಲಾ. ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲಾ ಎನ್ನುವಂತೆ ಸೋಶಿಯಲ್ ಮಿಡಿಯಾದಲ್ಲಿ ಪೊಸ್ಟ್ ವಾರ್ ನಡೆಯುತ್ತಿದೆ.

ವಿಜಯಕುಮಾರ ಸಾರವಾಡ
ಇನ್‌ ನ್ಯೂಜ್
ವಿಜಯಪುರ.

Tags:

error: Content is protected !!