ಬೆಳಗಾವಿ ಸ್ಮಾರ್ಟ್ ಸಿಟಿ ಅಡಿಯಲ್ಲಿ ಸಿಟಿಸ್ 2 ಪ್ರೊಜೆಕ್ಟಗಾಗಿ ಅಂತರಾಷ್ಟ್ರೀಯ ಟೀಮ್ ಫ್ರಾನ್ಸ್ ಮತ್ತು ಜರ್ಮನಿ ಹಾಗೂ ಕೇಂದ್ರ ಸರ್ಕಾರದ ಟೀಮ್ ಬೆಳಗಾವಿ ಮಹಾನಗರ ಪಾಲಿಕೆಗೆ ಭೇಟಿ ನೀಡಿ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮಹಾಪೌರರು ಹಾಗೂ ಉಪ ಮಹಾಪೌರರು ಮಹಾನಗರ ಪಾಲಿಕೆ ಬೆಳಗಾವಿ ರವರ ಉಪಸ್ಥಿತಿಯಲ್ಲಿ ಸಭೆಯನ್ನು ಜರುಗಿಸಿದರು..

ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಬೆಳಗಾವಿ ಸ್ಮಾರ್ಟ್ ಸಿಟಿ ಎಂ ಡಿ ರವರು ಬೆಳಗಾವಿ ನಗರದ ಬಗ್ಗೆ ಹಾಗೂ ಘನ ತ್ಯಾಜ್ಯ ವಿಲೇವಾರಿ ಕುರಿತು ಸಭೆಯಲ್ಲಿ ವಿವರಿಸಿದರು… ಸಭೆಯಲ್ಲಿ ಪೂಜ್ಯ ಮಹಾಪೌರರು ಮಾತನಾಡಿ ಪಾಲಿಕೆಯೂ ಸದ್ಯ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಕಾರ್ಯಗಳ ಬಗ್ಗೆ ಹಾಗೂ ಪಾಲಿಕೆಯಲಿ ಆಗಬೇಕಾದ ಅಭಿವೃದ್ಧಿ ಕುರಿತು ಮಾತನಾಡಿದರು….
ಸಭೆಯ ನಂತರ ಪಾಲಿಕೆಯ ಘಣ ತ್ಯಾಜ್ಯ ವಿಲೇವಾರಿ ಘಟಕ ತುರುಮರಿಗೆ ಭೇಟಿ ನೀಡಿ…. ಕಳೆದ ಭೇಟಿ ನಂತರ ಪಾಲಿಕೆಯು ಎಂಟು ತಿಂಗಳಲ್ಲಿ ಮಾತ್ರ ನಗರದಲ್ಲಿ ಹಾಗೂ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿರೋದನ್ನು ಕಂಡು ಪಾಲಿಕೆಯ ಆಯುಕ್ತರ ಹಾಗೂ ಸಿಬ್ಬಂದಿಗಳ ಕಾರ್ಯವೈಕರಿ ಬಗ್ಗೆ ಪ್ರoಶಿಸಿದರು …
ನಂತರ ಪಾಲಿಕೆಯ ಸದಾಶಿವನಗರ ಗ್ಯಾರೇಜ್ ಗೆ ಹಾಗೂ ಒನ ತ್ಯಾಜ್ಯ ಸಂಗ್ರಹಣ ಕೇಂದ್ರಕ್ಕೆ ಭೇಟಿ ನೀಡಿದರು…ಮಧ್ಯಾಹ್ನ ಊಟದ ನಂತರ ಪಾಲಿಕೆಯ ಖಾಸಬಾಗ್ ಬಯೋಗ್ಯಾಸ್ ಪ್ಲಾಂಟ್ ಹಾಗೂ ಡೇ ನಲ್ಮ್ ಸೆಂಟರಿಗೆ ಭೇಟಿ ನೀಡಿದರು…ಮಹಾನಗರ ಪಾಲಿಕೆ ಮಾನ್ಯ ಆಯುಕ್ತರು ಹಾಗೂ ಬೆಳಗಾವಿ ಸ್ಮಾರ್ಟ್ ಸಿಟಿ ಎಂ ಡಿ, ಎಲ್ಲಾ ಅಭಿಯಂತರರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು…