ಮನೆಯಲ್ಲಿ ಯಾರು ಇಲ್ಲದ ನೋಡಿದ ಖಧೀಮರು ಮನೆ ಬಾಗಿಲು ಕಿಲಿ ಮುರಿದು ಮನೆಯಲ್ಲಿದ್ದ 12 ತೊಲೆ ಬಂಗಾರ, ಬೆಳ್ಳಿ ಹಣವನ್ನು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಗುಡಿಹಾಳ ರೋಡ್ ವಾಣಿಪ್ಲಾಟ್‌ದಲ್ಲಿ ರಾತ್ರಿ ನಡೆದಿದೆ.

ಅಲ್ಲಾವುದ್ದೀನ್ ಎಮ್ ಲೊಂಡೆವಾಲೆ ಎಂಬುವವರ ಮನೆ ಕಳ್ಳತನವಾಗಿದೆ. ಮನೆಯವರು ರಾತ್ರಿ ಆಸ್ಪತ್ರೆಗೆಂದು ಹೋಗಿದ್ದಾರೆ. ಮರಳಿ ಬರೊವಷ್ಟರಲ್ಲಿ ಇಡೀ ಮನೆನೇ ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಮನೆಯಲ್ಲಿದ್ದ ಟ್ಯೂಜಿರಿ ಲಾಕರ್‌ಗಳನ್ನು ಮುರಿದು ಸುಮಾರು 12 ತೊಲೆ ಬಂಗಾರ, 60 ಗ್ರಾಮ ಬೆಳ್ಳಿ, 1,05000 ರೂ. ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ ಕೂಡಲೇ ಹಳೇ ಹುಬ್ಬಳ್ಳಿ ಪೊಲೀಸರು ರಾತ್ರಿವೇಳೆ ಬಂದು ಪರಿಶೀಲನೆ ನಡೆಸಿದ್ದಾರೆ. ಕಳ್ಳತನವಾದ 12 ತೊಲೆಯಲ್ಲಿ ಕೆಲವೊಂದಿಷ್ಟು ಬಂಗಾರದ ಆಭರಣಗಳನ್ನು ಮನೆಯ ಸುತ್ತಮುತ್ತ ಸಿಕ್ಕಿವೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಮದುವೆ ಇರೊದಕ್ಕೆ ಇಷ್ಟೊಂದು ಬಂಗಾರ ತಂದಿಟ್ಟಿದ್ದರು. ಈಗ ಕಳ್ಳತನವಾಗಿದ್ದರಿಂದ ಮನೆಯವರು ಗಾಭರಿಗೊಂಡಿದ್ದಾರೆ. ಪೊಲೀಸರು ಕಳ್ಳರಿಗೆ ಬಲೆ ಬಿಸಿದ್ದಾರ