ಅಥಣಿ ತಾಲೂಕಿನ ಜಕ್ಕಾರಟ್ಟಿ ಗ್ರಾಮದಲ್ಲಿ ಮೂರುದಿನಗಳ ಶ್ರೀ ಮಸ್ಹೋಬಾ ದೇವರ ಯಾತ್ರಾ ಮಹೋತ್ಸವ ಅತ್ಯಂತ ಶ್ರದ್ಧಾಭಕ್ತಿಯಲ್ಲಿ ನಡೆಯಿತು.

ಮೊದಲ ದಿನ ದೇವರ ಪಲ್ಲಕ್ಕಿ ಉತ್ಸವ, ಕುರುಬ ಸಂಪ್ರದಾಯದಂತೆ ಜೋಗುಳ ಹಾಡುಗಳ ಕಾರ್ಯಕ್ರಮ ನಡೆಯಿತು. ಇನ್ನು ಎರಡನೇಯ ದಿನ ಬೆಳಗಿನ ಜಾವ ದೇವರಿಗೆ ದೀರ್ಘದಂಡ ನಮಸ್ಕಾರ ಮತ್ತು ನೈವೇದ್ಯ. ರಾತ್ರಿ ಕಮಲ್ ಅನೀತಾ ಕರಾಡಕರ ಅವರಿಂದ ನೃತ್ಯ ಪ್ರಸ್ತುತಿ ನಡೆಯಿತು. ಮೂರನೇಯ ದಿನ ಬಂಡಿ ಗಾಡಿಯ, ಅ ಮತ್ತು ಬ ಶರ್ಯತ್ತು ನಡೆಯಿತು. ರಾತ್ರಿ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಿತು.
ಜಾತ್ರೋತ್ಸವವನ್ನು ಯಶಸ್ವಿಗೊಳಿಸಲು ಯಾತ್ರಾ ಮತ್ತು ಪಂಚ ಕಮೀಟಿಯ ಸದಸ್ಯರಾದ ಸಿದ್ಧು ಖೋತ್, ಸಂಜಯ್ ಸಾಳುಂಕೆ, ರಾಮಚಂದ್ರ ಕಾಂಬಳೆ, ರೂಪೇಶ್ ಚವ್ಹಾಣ್, ಪ್ರಕಾಶ್ ಕಾಂಬಳೆ, ಪ್ರಕಾಶ ಕುಟೆ, ರಾವಸಾಬ್ ಘೋರಪಡೆ, ವಿಠ್ಠಲ್ ಖೋತ್, ನಿವೃತ್ತಿ ಪವಾರ್, ಸಿದ್ರಾಮ್ ಖೋತ್, ಶ್ಯಾಮರಾವ್ ಶಿಂಧೆ, ತಾತೋಬಾ ಶಿಂಧೆ,, ಖಾಂಡೇಕರ, ಜಗತಾಪ್ ಸೇರಿದಂತೆ ಇನ್ನುಳಿದವರು ಶ್ರಮವಹಿಸಿದರು.