ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಉಚ್ಛಾಟಿಸಿ ಅವಮಾನಿಸಿದನ್ನು ಖಂಡಿಸಿ ತಾಲ್ಲೂಕಿನ ಉಕುಮನಾಳ ಗ್ರಾಮದಲ್ಲಿ ಪಂಚಮಸಾಲಿ ಸಮಾಜ ಹಾಗೂ ಹಿಂದೂ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಸನಗೌಡ ಪಾಟೀಲ ಯತ್ನಾಳ ಅವರ ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿದ ಕಾರ್ಯಕರ್ತರು, ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ, ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ನಿಂಗನಗೌಡ ಸೋಲಾಪುರ, ಸಂತೋಷ ಬಿರಾದಾರ, ಎಲ್ಲ ಸಮುದಾಯಗಳ ಪರವಾಗಿ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಗಟ್ಟಿ ಧ್ವನಿಯಾದ ಹಾಗೂ ಹಿಂದುತ್ವವನ್ನೇ ಉಸಿರಾಗಿಸಿಕೊಂಡಿರುವ ಜನ ನಾಯಕ ಬಸನಗೌಡ ಪಾಟೀಲ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಮೂಲಕ ಇಡೀ ಹಿಂದುತ್ವಕ್ಕೆ, ಲಿಂಗಾಯತರಿಗೆ ಮತ್ತು ಉತ್ತರ ಕರ್ನಾಟಕಕ್ಕೆ ಅಮಾನಿಸಿರುವುದು ಖಂಡನೀಯ. ಕೂಡಲೇ ಮರು ಪರಿಶೀಲಿಸಿ ಗೌರವವಿತವಾಗಿ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಸಂಗಮೇಶ ಬಬಲೇಶ್ವರ, ಬಿ.ಜಿ.ಬಿರಾದಾರ, ಲಕ್ಷ್ಮಣ ಹಿಪ್ಪರಗಿ, ಶ್ರೀಶೈಲ ಬಿರಾದಾರ, ಈರಣ್ಣ ಬಡಿಗೇರ, ಗುರುಶಾಣತ ಸೋಲಾಪುರ, ರಾಮಗೊಂಡ ಬಣಜಗೆರ, ಮಾಂತೇಶ ಅಲ್ಲಾಪುರ, ಮಲ್ಲು ಕುಂಬಾರ, ರಮೇಶ ಡೋಣೂರ, ಈರಣ್ಣ ಸೋಲಾಪುರ, ಸಚೀನ ಸೋಲಾಪುರ, ಸಿದ್ದು ಬಿರಾದಾರ, ಸಂತೋಷ ವಾಲಿಕಾರ, ಶಂಕ್ರೆಪ್ಪ ಸಂಗಾಪುರ, ಶ್ರೀಶೈಲ ಹಂಜಗಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.