ಬಸ್ಸನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರಿಗೆ ಬಸ್ಸನಲ್ಲಿಯೇ ಹೃದಯಾಘಾತವಾಗಿ ಕೊನೆಯುಸಿರೆಳೆದರು ಹೃದಯ ವಿದ್ರಾವಕ ಘಟನೆ, ಧಾರವಾಡ ಖಾಸಗಿ ಸಾರಿಗೆ ಬಸ್ಸನಲ್ಲಿ ಬುಧವಾರ ತಡ ಸಂಜೆ ಧಾರವಾಡ ಟೋಲನಾಕಾ ನಡೆದಿದ್ದು, ಮಹಿಳೆಯ ಹೃದಯಾಘಾತ ಹಿನ್ನಲೆ ಸಾರಿಗೆ ಬಸ್ಸ ಚಾಲಕ ಬಸ್ಸನ್ನು ಜಿಲ್ಲಾಸ್ಪತ್ರೆಗೆ ತಂದರು ಮಹಿಳೆಯ ಪ್ರಾಣಪಕ್ಷಿ ಹಾರಿಹೊಗಿದೆ.

ಧಾರವಾಡ ನಿರಾವರಿ ನಿಗಮದ ನೌಕರರಾಗಿದ್ದ ಇಂದುಮತಿ ಆರ್ ಕಾಂಬಳೆ ಬಸ್ಸನಲ್ಲಿ ಹೃದಯಾಘಾತವಾಗಿ ನಿಧನರಾದ ಹಿರಿಯ ಮಹಿಳೆಯ ಎಂದು ಗುರುತಿಸಲಾಗಿದೆ. ಧಾರವಾಡ ಜುಬ್ಲಿ ವೃತದಿಂದ ಮಹಿಳೆ ಬಸ್ಸ ಹತ್ತಿಕೊಂಡಿದ್ದು, ಟೋಲ ನಾಕ ಬಳಿ ಖಾಸಗಿ ಬಸ್ಸನ ಕಾರ್ಯನಿರ್ವಾಹಕ ಇಂದುಮತಿಯವರಿಗೆ ಟಿಕೆಟ್ ಕೇಳಲು ತೆರಳಿದದ್ದಾನೆ. ಈ ಸಮಯದಲ್ಲಿ ಮಹಿಳೆ ಯಾವುದೆ ಸ್ಪಂದನೆ ನೀಡಿಲ್ಲ, ಗಾಬರಿಯಾದ ಕಾರ್ಯನಿರ್ವಾಹಕ ಹುಬ್ಬಳ್ಳಿಗೆ ತೆರಳುತ್ತಿದ್ದ ಬಸ್ಸನ್ನು ತಕ್ಷಣವೇ ಮಹಿಳೆಯ ಆರೋಗ್ಯ ಸಮಸ್ಯೆ ಅರಿತು ಕಾರ್ಯನಿರ್ವಾಹಕ ಚಾಲಕನಿಗೆ ತಿಳಿಸಿದ್ದಾನೆ. ಈ ಮಧ್ಯ ಸಹ ಪ್ರಯಾಣಿಕರು ಕೂಡಾ ಮಹಿಳೆಯನ್ನು ಎಚ್ಚರಿಸಲು ಮುಂದಾಗಿದ್ದಾರೆ,
ಆದರೆ ಮಹಿಳೆ ಎಚ್ಚರಗೊಳ್ಳದ ಹಿನ್ನಲೆಯಲ್ಲಿ. ಹುಬ್ಬಳ್ಳಿಗೆ ತೆರಳುತ್ತಿದ್ದ ಸಾರಿಗೆ ಬಸ್ಸನ್ನು ನೇರವಾಗಿ ಚಾಲಕ ಮರಳಿ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ. ಆದರೆ ಎಲ್ಲರ ಜೀವ ರಕ್ಷಣೆಗೆ ಪ್ರಯತ್ನ ಮಾಡಿದ್ದರು, ಸಹ ಅಷ್ಟರಲ್ಲೇ ಮಹಿಳೆಯ ಪ್ರಾಣ ಪಕ್ಷಿ ಹಾರಹೋಗಿದೆ. ಇನ್ನೂ ಮಹಿಳೆಯ ಬಸ್ಸನಲ್ಲಿ ಹೃದಯಾಘಾತ ಸಂದರ್ಭದಲ್ಲಿನ ಸಾರಿಗೆ ಬಸ್ಸನಲ್ಲಿ ಚಲನವನದ ಘಟನೆ ದೃಶ್ಯ ಸಿಸಿಟಿವಿ ಸೆರೆಯಾಗಿದೆ.