Bagalkot

ಬಾಗಲಕೋಟೆ : ತಾರಕಕ್ಕೇರಿದ ಪಂಚಮಸಾಲಿ ಸ್ವಾಮೀಜಿ — ಕಾಶಪ್ಪನವರ ಕಾದಾಟ….. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷನಾಗಿ ಸ್ವಾಮೀಜಿಗೆ ಸೆಡ್ಡು ಹೊಡೆದ ಕಾಶಪ್ಪನವರ…..

Share

ಪಂಚಮಸಾಲಿ ಪೀಠಕ್ಕೆ ಪರ್ಯಾಯ ಸ್ವಾಮೀಜಿ ನೇಮಕ ವಿಚಾರ ಚರ್ಚೆ ಮುನ್ನಲೆಯ ಮಧ್ಯೆ ಪಂಚಮಸಾಲಿ ಟ್ರಸ್ಟ್ ಗೆ ನೂತನ ಅಧ್ಯಕ್ಷರಾಗಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ

ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯ ಸ್ವಾಮೀಜಿ ನಡುವಿನ ಕಾದಾಟ ತಾರಕ ಕ್ಕೇರಿದ್ದು, ಕೂಡಲಸಂಗಮದಲ್ಲಿ ಕಾಶಪ್ಪನವರ ನೇತೃತ್ವದಲ್ಲಿ ನಡೆಯಲಿರುವ ಸಭೆ ಎರಡು ದಿನ ಬಾಕಿ ಇರುವಾಗಲೇ ಹುಬ್ಬಳ್ಳಿಯಲ್ಲಿ ಗುರುವಾರ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಟ್ರಸ್ಟ ಹಾಲಿ ಅಧ್ಯಕ್ಷ ಪ್ರಬಣ್ಣ ಹುಣಸಿಕಟ್ಟಿ ರಾಜೀನಾಮೆ ನೀಡಿದ ಬೆನ್ನಲ್ಲೇ ವಿಜಯಾನಂದ ಕಾಶಪ್ಪನವರ ಅವರನ್ನು ಟ್ರಸ್ಟ್ ನಾ 34 ಜನ ಸದಸ್ಯರು ಒಕ್ಕೊರಲಿನಿಂದ ಅವಿರೋಧವಾಗಿ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಪಂಚಮಸಾಲಿ ಪೀಠದ ಅಸ್ತಿತ್ವದ ಆಟ ಮೇಲಾಟಗಳ ಮಧ್ಯ ಪ್ರಶ್ನೆ ಚುಕ್ಕಾಣಿ ಇದೀಗ ಕಾಶಪ್ಪನವರ ಕೈಗೆ ಸಿಕ್ಕಿದೆ.

ಇದೇ ಏ.19ರಂದು ಕೂಡಲಸಂಗಮದಲ್ಲಿ ಟ್ರಸ್ಟ್ ವತಿಯಿಂದ ಪೀಠಾಧಿಪತಿ ಕುರಿತು ಮಹತ್ವದ ಸಭೆ ನಡೆಯಲಿದೆ ಇನ್ನೊಂದೆಡೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಏ. 20ಕ್ಕೆ ಸಭೆ ಕರೆದಿದ್ದಾರೆ ಸ್ವಾಮೀಜಿ ಹಾಗೂ ಕಾಶಪ್ಪನವರ ನಡುವಿನ ಸಂಘರ್ಷ ಯಾವ ಮಟ್ಟವನ್ನು ತಲುಪುತ್ತದೆಯೋ ಎಂಬುದರ ಬಗ್ಗೆ ಎಲ್ಲರಲ್ಲಿ ಕುತೂಹಲ ಮೂಡಿಸಿದೆ.

Tags:

error: Content is protected !!