ಜಗದ್ಗುರು ನರೇಂದ್ರಜಿ ಮಹಾರಾಜರು ಆಧ್ಯಾತ್ಮಿಕ ದೊಂದಿಗೆ ಸಾಮಾಜಿಕ ಸೇವೆ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು. ಅವರ ಕರೆಗೆ ಸದ್ಭಕ್ತರು ಓಗೊಟ್ಟು ಕೇವಲ ೧೨ ದಿನಗಳಲ್ಲಿ ೧ ಲಕ್ಷ ೩೨ ಸಾವಿರ ಯುವಕರು ರಕ್ತದಾನ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಕಾಳಜಿ ವಹಿಸಿಕೊಂಡು ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತ ಸಂಭವಿಸಿದರೆ ಗಾಯಾಳುಗಳ ಪ್ರಾಣ ಕಾಪಾಡಲು ೫೩ ಆಂಬುಲೆನ್ಸ್ಗಳು ನೀಡಿ ಸಾಮಾಜಿಕ ಸೇವೆ ಕೈಗೊಂಡಿದ್ದರು. ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಗುರುವಾರ ರಂದು ಕಾಗವಾಡ ತಾಲೂಕಿನ ಮಂಗಸುಳಿ ಗ್ರಾಮದ ಸಬಾಭವನದಲ್ಲಿ ನರೇಂದ್ರಜಿ ಮಹಾರಾಜ ಇವರ ಪಾದುಕ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಾಸಕ ರಾಜು ಕಾಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಸುಳಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ೨೧ ಕಡು ಬಡವ ರೈತರಿಗೆ ಬೆಳೆಗಳ ಮೇಲೆ ಔಷದ ಸಿಂಪರಿಸುವ ಎಲೆಕ್ಟ್ರಾನಿಕ ಪಂಪುಗಳು ಶಾಸಕರ ಹಸ್ತೆಯಿಂದ ನೀಡಲಾಯಿತು.
ಕಾರ್ಯಕ್ರಮದ ಪ್ರಮುಖರಾದ ವಿಕಾಸ ಪಾಚರನೆ ಮಾತನಾಡಿ, ನರೇಂದ್ರಜಿ ಮಹಾರಾಜರು ಇವರಿಗೆ ನೀನು ಬದುಕು ಇನ್ನೊಬ್ಬನ್ನು ಬದುಕಲು ಬಿಡು ಎಂಬ ಸಂದೇಶ ನೀಡುತ್ತ ಬಂದಿದ್ದಾರೆ. ಶಿಕ್ಷಣದಿಂದ ವಂಚಿತ ವಾಗಿರುವ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಈಗಾಗಲೇ ಎಲ್.ಕೆ.ಜಿ ಯಿಂದ ಪಿಯುಸಿ ವರೆಗೆ ಸಂಸ್ಥೆ ಪ್ರಾರಂಭಿಸಿದ್ದು ೧೮೦೦ ವಿದ್ಯಾರ್ಥಿಗಳು ಓದುತ್ತಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸರಿಯಾದ ಸಮಯದಲ್ಲಿ ಉಪಚಾರ ಸಿಗದೇ ರಸ್ತೆ ಮಧ್ಯದಲ್ಲಿ ಸಾವಣಾಪೂರ್ತಿದ್ದಾರೆ ಇದನ್ನು ಗಮನಿಸಿ, ರಾಜ್ಯ ಹೆದ್ದಾರಿಯ ಮೇಲೆ ೫೩ ಆಂಬ್ಯುಲೆನ್ಸ್ಗಳು ಉಚಿತ ಸೇವೆಯಲ್ಲಿ ಪ್ರಾರಂಭಿಸಿದ್ದಾರೆ. ಅನೇಕ ಕಡು ಬುಡುವ ಮಹಿಳೆಯರಿಗೆ ಕೈಗೆ ಕೆಲಸ ನೀಡುವ ನಿಮಿತ್ಯದಿಂದ ಹೊಲಿಗೆ ಯಂತ್ರಗಳು, ಬಿಸು ಗಿರಣಿಗಳು ನೀಡಿದ್ದಾರೆ.
ಅಲ್ಲದೆ ಕೋರೊನಾ ಮಹಾಮಾರಿಯ ಸಮಸ್ಯೆಯಲ್ಲಿರುವ ರೋಗಿಗಳಿಗೆ ಸಹಾಯ ಮಾಡಲಾಗಿದೆ ಅದರಂತೆ, ಭೂಕಂಪ, ಇನ್ನಿತರ ಅಪತಕಾಲದಲ್ಲಿ ಎಲ್ಲ ರೀತಿ ಸಹಕಾರ ನೀಡುತ್ತಿದ್ದಾರೆ. ಇಂತಹ ಸಂತರ ಪಾದುಕ ದರ್ಶನ ಕಾರ್ಯಕ್ರಮ ಮಂಗಸೂಳಿಯಲ್ಲಿ ಜರುಗಿದೆ. ಕಾರ್ಯಕ್ರಮದಲ್ಲಿ ಸುಮಾರು ಆರು ಸಾವಿರ ಸದ್ಭಕ್ತರು ಪಾಲ್ಗೊಂಡಿದ್ದರು ಎಂದು ಸಂಯೋಜಕರಾದ ಸಂಜಯ ಚೌಹಾನ ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಸುಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಚಿದಾನಂದ ಮಾಳಿ, ಗ್ರಾಪ್ರಂ ಸದಸ್ ರಾಜು ಕುಲಕರ್ಣಿ, ಪ್ರೋಟೋಕಾಲ ಪ್ರಮುಖರಾದ ವಿಜಯ ಧನವಡೆ, ಸಂಜೆ ವಾಲೋಕರ್ ನಿರೀಕ್ಷಕರು ಬೆಳಗಾವಿ ವಿಭಾಗದ ಅಧ್ಯಕ್ಷ ಅನ್ನಾಸಾಬ ಬೋಸಲೆ, ಗೋವಾ ವಿಭಾಗದ ಮಹಿಳಾ ಪ್ರಮುಖ ನಂದಾ ಮೋಹನ ಇನಾಮ್ದಾರ, ಬೆಳಗಾವಿ ಮಹಿಳಾ ವಿಭಾಗದ ಪ್ರಮುಖ ಕಾಂಚನ ಪಡನೇಕರ, ಸಾಧನಾ ಹಿಂದೆ, ನಾನಿಜ ಮಠದ ಪ್ರಮುಖ ಪುರೋಹಿತರು ಪದುಕ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಸುಕುಮಾರ ಬನ್ನೂರೆ
ಇನ್ ನ್ಯೂಜ್ ಕಾಗವಾಡ