Gokak

ಬೆಳಗಾವಿಯಲ್ಲಿ ಚಾಕು ಇರಿದು ಮೂರು ಮಕ್ಕಳ ತಾಯಿಯ ಬರ್ಬರ ಹತ್ಯೆ!

Share

ಕುಡಿದ ಮತ್ತಿನಲ್ಲಿ ಚೂರಿ ಚುಚ್ಚಿ ಮೂರು ಮಕ್ಕಳ ತಾಯಿಯಾದ ತನ್ನ ಅತ್ತಿಗೆಯನ್ನೇ ಭಾಮೈದನೊಬ್ಬ ಬರ್ಬರವಾಗಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ರಹಿವಾಸಿ ಸುಜಾತಾ ಮಂಜುನಾಥ ಚತ್ರಕೋಟಿ (24) ಕೊಲೆಯಾದ ದುರ್ದೈವಿಯಾಗಿದ್ದಾರೆ. ಬಂಗಾರಪ್ಪ ಈರಯ್ಯನ್ನವರ ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಖನಗಾಂವ ಗ್ರಾಮದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ ವಾಸವಿದ್ದ ಸುಜಾತಾ ಮತ್ತು ಆಕೆಯ ಸಹೋದರಿಯ ಮಧ್ಯೆ ಕಳೆದ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಕುಡಿದ ಮತ್ತಿನಲ್ಲಿದ್ದ ಆರೋಪಿ ಬಂಗಾರಪ್ಪ ಅತ್ತೆಗೆ ಸುಜಾತಾ ಹೊಟ್ಟೆಗೆ ಚೂರಿ ಚುಚ್ಚಿದ್ದಾನೆ. ತಕ್ಷಣವೇ ಗಂಭೀರ ಗಾಯಗೊಂಡ ಸುಜಾತಾಳನ್ನ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೇ ಚಿಕಿತ್ಸೆ ಫಲಿಸದೇ ಇಂದು ಸುಜತಾ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹೊಲದಲ್ಲಿ ಟ್ರ್ಯಾಕ್ಟರ್ ಮೂಲಕ ಕೆಲಸ ಮಾಡುತ್ತಿದ್ದ ವೇಳೆ ಹೊಲದ ಮಾಲೀಕರು ತನ್ನ ಪತ್ನಿಗೆ ಗಂಭೀರ ಪೆಟ್ಟಾಗಿದ್ದು, ಗೋಕಾಕಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಬೇಕಾಗಿದೆ ಎಂದು ಹೇಳಿದರು. ಆಸ್ಪತ್ರೆಗೆ ಬಂದು ನೋಡಿದಾಗ ನಡೆದ ಘಟನೆ ಬೆಳಕಿಗೆ ಬಂದಿದೆ.  ಸಹೋದರನ ಮಕ್ಕಳು ಮನೆಗೆ ಬರುತ್ತಿದ್ದಾಗ ಆಗಾಗ ಜಗಳವಾಗಿತ್ತು ಎಂದು ಮೃತ ಸುಜಾತಾ ಪತಿ ಮಂಜು ಚತ್ರಕೋಟಿ ಹೇಳಿದರು.

ಕುಡಿದ ನಶೆಯಲ್ಲಿ ನನ್ನ ಮಗಳನ್ನು ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಮೊದಲೂ ಚಿಕ್ಕಮಕ್ಕಳಿಗಾಗಿ ಸಹೋದರರ ಕುಟುಂಬದಲ್ಲಿ ಜಗಳವಾಗಿತ್ತು. ಭಾಮೈದ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವುದಾಗಿ ಚಿಕಿತ್ಸೆಗೆ ಕರೆ ತರುತ್ತಿದ್ದಾಗ ನನ್ನ ಮಗಳು ತಿಳಿಸಿದ್ದಾಳೆ ಎಂದು ಮೃತ ಸುಜಾತಾ ತಾಯಿ ಮಲ್ಲವ್ವ ತಿಳಿಸಿದರು.

ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚೂರಿ ಚುಚ್ಚಿದದ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Tags:

error: Content is protected !!