ಇಂದು ಯುಪಿಎಸ್ ಸಿ ಫಲಿತಾಂಶ ಪ್ರಕಟಗೊಂಡಿದೆ. ವಿಜಯಪುರ ಜಿಲ್ಲೆಯ ವೈದ್ಯರೊಬ್ಬರು ಸಾಧನೆ ಮಾಡಿದ್ದಾರೆ. ವೈದ್ಯಾಧಿಕಾರಿ ಡಾ.ಮಹೇಶ ಮಡಿವಾಳರ UPSC ಪರೀಕ್ಷೆಯಲ್ಲಿ 482 ನೇ ರ್‍ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಮಹೇಶ್ ಇವರು ಮೂರನೇ ಚಾನ್ಸ್ ನಲ್ಲಿ ಯಶಸ್ಸುಕಂಡಿದ್ದಾರೆ.

ಕಳೆದ ನಾಲ್ಕು ವರ್ಷದಿಂದ ಮಡಿಕೇಶ್ವರ ಆರೋಗ್ಯ ಕೇಂದ್ರದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೊದಲು ಸಕಲೇಶಪುರ ಗ್ರಾಮೀಣ ಭಾಗದಲ್ಲಿ ಒಂದುವರೆ ವರ್ಷ ಆರೋಗ್ಯ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಮೂರನೇ ಸಲ ಯುಪಿಎಸ್ ಸಿ ಯಶಸ್ಸು ಕಂಡಿದ್ದಾರೆ. ವೈದ್ಯ ಮಹೇಶ ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.