khanapur

ಖಾನಾಪೂರ ತಾಲೂಕಾ ಗಾಣಿಗ ಅಭಿವೃದ್ಧಿ ಸಂಘದ ವತಿಯಿಂದ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರ ಸತ್ಕಾರ

Share

ಖಾನಾಪೂರ ತಾಲೂಕಿನ ನೂತನ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರನ್ನು ಖಾನಾಪೂರ ತಾಲೂಕಾ ಗಾಣಿಗ ಅಭಿವೃದ್ಧಿ ಸಂಘದ ವತಿಯಿಂದ ಸ್ವಾಗತಿಸಿ ಮಾಲಾರ್ಪಣೆ ಮಾಡಿ ಶಾಲು ಹೊದಿಸಿ ಸತ್ಕರಿಸಲಾಯಿತು.ಸತ್ಕಾರ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಅವರು ಖಾನಾಪೂರ ತಾಲೂಕಿನ ಅಭಿವೃದ್ಧಿಗೆ ಸರ್ಕಾರ ಮಟ್ಟದ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಗಾಣಿಗ ಅಭಿವೃದ್ಧಿ ಸಂಘದ ತಾಲೂಕಾ ಅಧ್ಯಕ್ಷ ಅಡಿವೆಪ್ಪ ಕೋಟಿ, ಕಾರ್ಯದರ್ಶಿ ಪ್ರಕಾಶ್ ಹೊಸಮನಿ, ವಿಜಯ ಮುತಗಿ, ಶಿವಪುತ್ರ ಸವದಿ, ಪ್ರಕಾಶ್ ಕಾದ್ರೋಳ್ಳಿ, ಈಶ್ವರ್ ಕಾದ್ರೋಳ್ಳಿ, ಗಂಗಾಧರ ಮಡ್ಡಿಮನಿ, ರಾಜೇಶ್ ಜಾಂಬೋಟ್ಟಿ, ಮಲ್ಲಿಕಾರ್ಜುನ ಮುತಗಿ, ಬಸವರಾಜ ಬಾಳೇಕುಂದ್ರಿ , ದುಂಡಪ್ಪ ಗಾಣಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ

Tags:

error: Content is protected !!