Uncategorized

ಶಾಸಕ ರಾಜು ಕಾಗೆ ನೇತೃತ್ವದಲ್ಲಿ ಇತ್ಯರ್ಥಗೊಂಡ ಫರೀದ್ ಖಾನ್ ವಾಡಿ ಅನಂತಮೂರ್ತಿ ರಸ್ತೆ ಸಮಸ್ಯೆ

Share

ಕಾಗವಾಡ ತಾಲೂಕಿನ ಉಗಾರ ಪುರಸಭೆ ವ್ಯಾಪ್ತಿಯ ಫರೀದಖಾನವಾಡಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಸಮಸ್ಯೆ ಇರುವ ಅನಂತಮೂರ್ತಿ ರಸ್ತೆ ಸಮಸ್ಯೆ ಇತ್ಯರ್ಥ ಗೊಂಡಿದ್ದು, ಸುಮಾರು ಒಂದುಸಾವಿರ ರೈತರಿಗೆ ಲಾಭವಾಗಲಿದೆ. ಇಲ್ಲಿಯ ರೈತರಿಗೆ ಸಾರ್ವಜನಿಕರಿಗೆ ಪ್ರತಿದಿನ ಕೇವಲ ಅರ್ಧ ಕಿಲೋಮೀಟರ ಅಂತರದ ರಸ್ತೆಯ ಸಮಸ್ಯೆಯಿಂದ ನಾಲ್ಕು ಕಿಲೋಮಿಟರ ಮಾರ್ಗದ ಸುತ್ತಾಪಡಿಸುವುದು ರೈತರ ಸಮಸ್ಯೆ ಇತ್ಯರ್ಥಗೊಂಡಿದೆ ಎಂದು ಉಗಾರ ಪುರಸಭೆ ಸದಸ್ಯ ವೀರಬದ್ರ ಕಟಗೇರಿ ಇವರು ಹೇಳಿದರು.

ಮಂಗಳವಾರ ರಂದು ಫರಿದಕಾನವಾಡಿ ಗ್ರಾಮದಲ್ಲಿ ಅನಂತಮೂರ್ತಿ ರಸ್ತೆ ಸಮಸ್ಯೆ ಕಳೆದ 30 ವರ್ಷಗಳಿಂದ ಇತ್ತು. ಶಾಸಕ ರಾಜು ಕಾಗೆ, ಉಗಾರ ಪುರಸಭೆಯ ಅಧಿಕಾರಿಗಳು ಸದಸ್ಯರು ಉಗಾರ್ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು, ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡ ಮಹಾದೇವ ಶಂಕರ ಕಟಗೇರಿ, ಸುಖದೇವ ಥೂರುಷೆ, ವೀರಭದ್ರ ಕಟಗೇರಿ ಇವರು ವಿಶೇಷವಾಗಿ ಶ್ರಮಿಸಿದ ರಿಂದ ರಸ್ತೆ ಮಧ್ಯದಲ್ಲಿರುವ ಗಿಡ, ಗಂಟೆಗಳು ತೆರವುಗೂಳಿಸಿ ಇಲ್ಲಿಯ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಫರಿದಖಾನವಾಡಿ ಗ್ರಾಮದಿಂದ ಮಂಗಸುಳಿ -ಐನಾಪುರ ಸರ್ಕಾರಿ ರಸ್ತೆದವರೆಗೆ ಸಂಪರ್ಕಗೊಳ್ಳುತ್ತಿದ್ದು ಈ ಮೊದಲು ನಾಲ್ಕು ಕಿಲೋಮೀಟರ ಸುತ್ತಾ ಬಳಸಿ ಈ ಮಾರ್ಗದಲ್ಲಿ ಪ್ರತಿದಿನ ರೈತರು ದಿನನಿತ್ಯದ ಕೆಲಸಕ್ಕೆ ಹೋಗಬೇಕಾಗಿತ್ತು. ಈ ರಸ್ತೆಯಿಂದ ಸುಮಾರು ಒಂದು ಸಾವಿರ ಎಕರೆ ಕ್ಷೇತ್ರದ ರೈತರಿಗೆ ಸಹಾಯವಾಗಲಿದೆ.  ಅಲ್ಲದೆ ಸುಮಾರು 100 ನೂರು ವರ್ಷದೈ ಪುರಾತನದ ಜಾಗೃತ ಗಣೇಶನ ಮಂದಿರ ಇದ್ದು ಭಕ್ತರಿಗೆ ದರ್ಶನಕ್ಕೆ ಹೋಗಲು ತೊಂದರೆವಾಗುತ್ತಿತು ಇಂತಹ ಸಮಸ್ಯೆ ಇತ್ಯರ್ಥಗೊಂಡಿದ್ದರಿಂದೆ ಎಂದು ಪ್ರಕಾಶ ಕೂಥಲಾಂಡ ಹೇಳಿದರು.

ರಸ್ತೆ ಸಮಸ್ಯೆ ಬಗೆಹರಿಸಲು ಗ್ರಾಮದ ಹಿರಿಯರಾದ ಅಶೋಕ ಥೂರುಷೆ, ಶಿವಾನಂದ ಕಟಗೇರಿ, ಪ್ರಕಾಶ ಕೂತಲಾಂಡೆ, ಅರುಣ ಜಾಯಗೊಂಡೆ, ಅಶೋಕ ಥೂರುಷೆ, ಅರುಣ ಜಾಯಗೊಂಡೆ, ಪ್ರಕಾಶ್ ಜಾಯಗೊಂಡೆ, ಲಕ್ಷ್ಮಣ ಕಟಗೇರಿ, ಲಕ್ಷ್ಮಣ ಪವಾಡೆ, ಶಿವಗೌಡಾ ಕಟಗೇರಿ ಶೆರಿದಂತೆ ಅನೇಕರು ಸಹಕರಿಸಿದರು.

ಸುಕುಮಾರ ಬನ್ನೂರೆ
ಇನ ನ್ಯೂಸ ಕಾಗವಾಡ

Tags:

error: Content is protected !!