ಜನಿವಾರ ಧರಿಸಿದ್ದಕ್ಕೆ ಪರೀಕ್ಷೆಗೆ ನಿರಾಕರಿಸಿದ್ದನ್ನ ಖಂಡಿಸಿ ವಿಜಯಪುರದಲ್ಲಿ ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಡಿಸಿ ಕಚೇರಿ ಎದುರು ಜಮಾಯಿಸಿದ ಅಖಿಲ ಭಾರತ ಬ್ರಾಹ್ಮಣ ಸಮಾಜ ಮಹಾಸಂಘದ ಸಮಿತಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ರು. ಪರೀಕ್ಷೆ ನಡೆಸ ಸಮಯದಲ್ಲಿ ಜನಿವಾರ ತೆಗೆಸಿದ ಕ್ರಮ ಖಂಡನೀಯ, ಅಧಿಕಾರಿ ಮೇಲೆ ಶಿಸ್ತಿಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ರು. ಘಟನೆಯಿಂದಾಗಿ ಬ್ರಾಹ್ಮಣ ಸಮುದಾಯದಲ್ಲಿ ಆತಂಕ ಮೂಡಿದೆ ಎಂದು ಸಂಘಟನೆಯ ಮುಖಂಡರು ಕಳವಳ ವ್ಯಕ್ತಪಡಿಸಿದರು. ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ವಿದ್ಯಾರ್ಥಿಯ ಪವಿತ್ರ ಜನಿವಾರ ತೆಗೆಸಿರುವ ಘಟನೆ ಸಮಸ್ತ ಬ್ರಾಹ್ಮಣ ಸಮುದಾಯದವರಲ್ಲಿ ನೋವುಂಟು ಮಾಡಿದೆ, ಕೂಡಲೇ ಈ ರೀತಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ತಪ್ಪಿತಸ್ಥರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಬ್ರಾಹ್ಮಣ ಸಮಾಜದ ಯುವ ಮುಖಂಡರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ವಿಜಯ ಜೋಶಿ, ರೋಹನ್ ಆಪ್ಟೆ, ಗೋವಿಂದ ಜೋಶಿ, ರಾಕೇಶ್ ಕುಲಕರ್ಣಿ, ವೆಂಕಟೇಶ್ ಜೋಶಿ, ವಿಕಾಸ್ ಪದಕಿ, ಸಂಜೀವ ದೀವಾಣಜಿ, ದತ್ತಾತ್ರಾಯ ಜೋಶಿ, ವೆಂಕಟೇಶ್ ಗುಡಿ ಸಂತೋಷ ಕುಲಕರ್ಣಿ ನಾಗರಾಜ್ ಜೋಶಿ ಗುರುರಾಜ್ ರಾವ್ ಪ್ರಶಾಂತ ರಾವ್ ವಲ್ಲಭ ಮತ್ತಿತರರು ಉಪಸ್ಥಿತರಿದ್ದರು.