ಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ಸಿಗೆ ಬರ್ತಾರೆ ಎಂಬುದೆಲ್ಲ ಸುಳ್ಳು, ನಮಗ್ಯಾಕೆ ಅವರ ಪಕ್ಷದವರ ಸುದ್ದಿ
ಅವರಂಟು, ಅವರ ಪಕ್ಷ ಉಂಟು ಒಳ್ಳೆಯದಾಗಲಿ ಎಂದ ಉಪಮುಖ್ಯಮಂತ್ರು ಡಿ ಕೆ ಶಿವಕುಮಾರ್ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಕರ್ನಾಟಕ ಭವನದ ಉದ್ಘಾಟನೆ ಇದೆ. ಮುಖ್ಯಮಂತ್ರಿಗಳ ಕಾಲು ಸರಿ ಇರಲಿಲ್ಲ. ಹೀಗಾಗಿ ಬಹಳ ದಿನಗಳ ಹಿಂದೆ ಆಗಬೇಕಾಗಿತ್ತು. ಈ
ಮಧ್ಯದಲ್ಲಿ ಅಸೆಂಬ್ಲಿ ಸೆಷನ್ ಬಂತು. ಹೀಗಾಗಿ ಇಂದು ಸಾಯಂಕಾಲ ನಡೆಯಲಿದೆ ಎಂದರು.
ನಾಲ್ಕು ಎಂಎಲ್‌ಸಿ ಕೂಡ ಖಾಲಿ ಇದೆ. ಅದು ಕೂಡ ನಾಳೆ ನಾಡಿದ್ದು ಆಗುತ್ತೆ. ಸಂಪುಟದಲ್ಲಿ ಸರ್ಜರಿ
ಅದೆಲ್ಲ ಯಾವುದು ಆಗಲ್ಲ.
ಮಾಧ್ಯಮಗಳಿಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಅದೆಲ್ಲ ಏನೇ ಇದ್ದರೂ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಸಿಎಂ ಹಾಗೂ ಪಕ್ಷದ ವರಿಷ್ಠರು ಏನು ಮಾತಾಡ್ತಾರೆ. ಅದೇ
ಮಾಧ್ಯಮಗಳ ಮಾಹಿತಿ ಸತ್ಯಕ್ಕೆ ದೂರವಾದಂತ ವಿಚಾರ ಎಂದರು.
ನಾಲ್ಕು ಎಂಎಲ್‌ಸಿಗಳ ಸ್ಥಾನ ಭರ್ತಿ ಬಗ್ಗೆ ಚರ್ಚೆ ಆಗುತ್ತೆ. ಖಂಡಿತ ನಾವು ಮಾಡುತ್ತೇವೆ. ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ನವರ ಮನವಿ ವಿಚಾರಕ್ಕೆ ಪ್ರತಿಕ್ರಿಯಿಸಿ
ನನಗೆ ಅವರು ಅರ್ಜಿ ಕೊಟ್ಟಿದ್ದಾರೆ. ಅದನ್ನೆಲ್ಲ ಗಮನಿಸಿದ್ದೇನೆ.
ವಕ್ಫ ಮಸೂದೆ ಅನುಮೋದನೆ ವಿಚಾರಕ್ಕೆ ಪ್ರತಿಕ್ರಿಯೆಗೆ ಅವರು ನಿರಾಕರಿಸಿದರು.