ಕಿರಿಯ ವಕೀಲರಿಗೆ ಹೊಸದನ್ನು ಕಲಿಯಲು ಮುಕ್ತ ನ್ಯಾಯಾಲಯಕ್ಕಿಂತ ಬೇರೆ ಯಾವುದೇ ಉತ್ತಮ ಮಾಧ್ಯಮವಿಲ್ಲ ಎಂದು ಜಸ್ಟಿಸ್ ರಾಮಚಂದ್ರ ಹುದ್ಧಾರ ಹೇಳಿದರು.

ಬೆಳಗಾವಿ ಜಿಲ್ಲಾ ನ್ಯಾಯಾಂಗ ಮತ್ತು ಲೋಕೋಪಯೋಗಿ ಇಲಾಖೆ ಹಾಗೂ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ನ್ಯಾಯಾಲಯದಲ್ಲಿ ನೂತನ ಸಮುದಾಯ ಭವನದ ಉದ್ಘಾಟನೆ, ಆಡಳಿತ ಭವನ ಮತ್ತು ಕ್ಯಾಂಟಿನ್ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಸಚೀನ್ ಮಗದುಮ್ಮ, ಕೆ.ಎಸ್. ಹೇಮಲೇಖಾ, ರಾಮಚಂದ್ರ ಹುದ್ಧಾರ, ವಿಜಯಕುಮಾರ್ ಪಾಟೀಲ್, ಉತ್ತರ ಶಾಸಕರಾದ ಆಸೀಫ್ ಸೇಠ್, ಜಿಲ್ಲಾ ನ್ಯಾಯಾಧೀಶರಾದ ಟಿ.ಎನ್. ಇನವಳ್ಳಿ, ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಎಸ್.ಎಸ್.ಕಿವಡಸಣ್ಣವರ, ಕಾರ್ಯದರ್ಶಿಯಾದ ಯಲ್ಲಪ್ಪ ದಿವಟೆ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಾದ ಎಸ್.ಎಸ್. ಸೊಬರದ ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ನೂತನ ಸಮುದಾಯ ಭವನದ ಲೋಕಾರ್ಪಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಆಸೀಫ್ ಸೇಠ್ ಅವರು ನೂತನ ಕಟ್ಟಡವನ್ನು ನಿರ್ಮಿಸಬೇಕೆಂದು ಹೇಳಿದಾಗ, ಕೂಡಲೇ ಅನುದಾನವನ್ನು ಮಂಜೂರು ಮಾಡಲಾಗಿದೆ. ಬೆಳಗಾವಿಯ ನ್ಯಾಯಾಲಯ ಮತ್ತು ಬಾರ್ ಅಸೋಸಿಯೇಷನ್’ಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿ ಕೊಡಲಾಗುತ್ತಿದೆ. ನ್ಯಾಯವಾದಿಗಳು ದೇಶದ ನ್ಯಾಯವ್ಯವಸ್ಥೆಯನ್ನು ಅಖಂಡವಾಗಿಸುವ ಕೆಲಸವನ್ನು ಮಾಡುತ್ತಾರೆ. ನೊಂದ ಜನರಿಗೆ ನ್ಯಾಯ ಒದಗಿಸಲು ನ್ಯಾಯವಾದಿಗಳು ಪರಿಶ್ರಮಪಡುತ್ತಾರೆ ಎಂದರು.
ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಕುಮಾರ ಪಾಟೀಲ್ ಇತ್ತಿಚಿನ ಯುವಕರು ಕಾನೂನು ಶಾಸ್ತ್ರವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರು ಪ್ರಾಮಾಣಿಕವಾಗಿ ನ್ಯಾಯ ಒದಗಿಸಲು ಶ್ರಮಿಸಬೇಕು. ಬೆಳಗಾವಿಯ ಸಮುದಾಯ ಭವನವು ಅತ್ಯಂತ ಸುಸಜ್ಜವಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕಾನೂನು ಶಾಸ್ತ್ರದ ಕುರಿತು ಮಾರ್ಗದರ್ಶನಗಳನ್ನು ವರಿಷ್ಠರು ನೀಡಬೇಕೆಂದರು.
ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ರಾಮಚಂದ್ರ ಹುದ್ಧಾರ, ಮುಕ್ತ ನ್ಯಾಯಾಲಯಕ್ಕಿಂತ ಬೇರ್ಯಾವುದು ಕಿರಿಯ ನ್ಯಾಯವಾದಿಗಳಿಗೆ ಉತ್ತಮ ಕಲಿಕೆಯ ಮಾಧ್ಯಮವಿಲ್ಲ. ಬೆಳಗಾವಿಯಲ್ಲಿ ಅತ್ಯಂತ ಪರಿಣಿತ ನ್ಯಾಯವಾದಿಗಳಿದ್ದು, ವಿವಿಧ ಪ್ರಕರಣದ ವ್ಯಾಜ್ಯಗಳು ಇಲ್ಲಿಗೆ ಬರುತ್ತವೆ. ಕಿರಿಯ ನ್ಯಾಯವಾದಿಗಳು ಪ್ರತಿದಿನ ಮುಕ್ತ ನ್ಯಾಯಾಲಯಕ್ಕೆ ಭೇಟಿ ನೀಡಿ, ಹೊಸ ಹೊಸದನ್ನು ಕಲಿತು ಪರಿಣಿತರಾಗಬೇಕೆಂದರು ಕರೆ ನೀಡಿದರು.
ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಹೇಮಲೇಖಾ ಇಂದು ತಾವು ನ್ಯಾಯಾಲಯ ವ್ಯವಸ್ಥೆಯಲ್ಲಿ ಉನ್ನತ ಸ್ಥಾನಕ್ಕೆರಲು ತಾವೂ ಕೂಡ ಬೆಳಗಾವಿಯಲ್ಲಿ ಮಾಡಿದ ಅಭ್ಯಾಸವೇ ಕಾರಣ ಎಂದರು. ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ತಮಗೆ ಅವಕಾಶ ನೀಡಿದಕ್ಕಾಗಿ ಧನ್ಯವಾದಗಳನ್ನು ತಿಳಿಸಿ, ನೂತನ ಸಮುದಾಯ ಭವನವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಬಾರ್ ಅಸೋಷಿಯೇಷನ್’ನ ಸದಸ್ಯರು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.