ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಬೇಸಿಗೆಯನ್ನು ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲು ವಿಶೇಷ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಎಲ್. ಆಂಡ್ ಟಿ. ಕಾರ್ಯವೈಖರಿಯ ವಿರುದ್ಧ ನಗರಸೇವಕರು ತೀವ್ರ ಅಸಮಾಧಾನವನ್ನು ವಹಿಸಿದರು. ಇಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಮಂಗೇಶ್ ಪವಾರ್ , ಉಪಮಹಾಪೌರ ವಾಣಿ ಜೋಶಿ, ಮತ್ತು ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ ಬಿ. ಅವರ ಉಪಸ್ಥಿತಿಯಲ್ಲಿ ಬೇಸಿಗೆಯಲ್ಲಿ ನೀರು ನಿರ್ವಹಣೆ ಕುರಿತು ವಿಶೇಷ ಸಭೆಯನ್ನು ಕರೆಯಲಾಗಿತ್ತು.

ತಮ್ಮ ವಾರ್ಡಿನಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಮಸ್ಯೆಯನ್ನು ಬಗೆಹರಿಸಿ ಬೇಸಿಗೆಯಲ್ಲಿ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕು ಎಂದರು. ಇದಕ್ಕೆ ಅಧಿಕಾರಿಗಳು ಸದ್ಯ ಟ್ಯಾಂಕರ್ ಮೂಲಕ ಜನರಿಗೆ ನೀರು ಪೂರೈಸುತ್ತಿರುವುದಾಗಿ ತಿಳಿಸಿದರು. ಇದಕ್ಕೆ ನಗರಸೇವಕರು ಮಹಾಪಾಲಿಕೆಯ ಅಸ್ತಿತ್ವದಲ್ಲಿದ್ದಾಗ ಸಮಸ್ಯೆಗಳು ಬೇಗನೆ ನಿವಾರಣೆಯಾಗುತ್ತಿದ್ದವು. ಈಗೇಕೆ ಆಗುತ್ತಿಲ್ಲವೆಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಮಹಾಪೌರರು ಮತ್ತು ಆಯುಕ್ತರು ಟ್ಯಾಂಕರ್’ನಿಂದ ನೀರು ಪೂರೈಸಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸುವ ಬದಲೂ, ಸಮಸ್ಯೆಯನ್ನ ಕಂಡು ಹಿಡಿದು ನಿವಾರಿಸಬೇಕು. ಅಲ್ಲದೇ, ಅಲ್ಲಲ್ಲಿ ಅರ್ಧಂಬರ್ಧಂ ಕೆಲಸಗಳನ್ನು ಮಾಡುವ ಬದಲೂ ಒಂದೆಡೇಯ ಕೆಲಸವನ್ನು ಪೂರ್ಣಗೊಳಿಸಿ, ಮುಂದಿನ ಪ್ರದೇಶದ ಕೆಲಸವನ್ನು ಕೈಗೆತ್ತಿಕೊಳ್ಳಬೇಕೆಂದು ಸಲಹೆಯನ್ನು ನೀಡಿದರು.
ನಗರಸೇವಕ ರಾಜಶೇಖರ ಢೋಣಿ ಅವರು ಎಲ್ ಆಂಡ್ ಟಿ ಕಂಪನಿಯ ವತಿಯಿಂದ ಎಲ್ಲೆಂದರಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಇದರಿಂದಾಗಿ ರಸ್ತೆ ಮಂಜೂರಾದರೂ ಕಾಮಗಾರಿ ಆರಂಭವಾಗುತ್ತಿಲ್ಲ. ರಿಸ್ಟೋರೇಶನ್ ಮಾಡಲು ಮೀನಮೇಷ ಎನಿಸಲಾಗುತ್ತಿದೆ. ಟ್ಯಾಂಕರ್ ಕೂಡ ಬೆಳಿಗ್ಗೆ ಹೇಳಿದರೇ ಸಂಜೆ ಕಳುಹಿಸಿ ಕೊಡಲಾಗುತ್ತಿದೆ. ಶ್ರೀನಗರಗೆ ಪ್ರತ್ಯೇಕ ಟ್ಯಾಂಕರ್ ಒದಗಿಸಬೇಕು. ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಿ ನೀರು ಪೋಲಾಗುವುದನ್ನು ತಪ್ಪಿಸಬೇಕೆಂದರು.
ಇನ್ನು ವಾರ್ಡ್ ನಂ. 26 ರ ನಗರಸೇವಕಿ ರೇಖಾ ಹೂಗಾರ ತಮ್ಮ ವಾರ್ಡಿನಲ್ಲಿ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗುತ್ತಿದೆ. ಜಲಮಂಡಳಿಯವರು ಸಮಸ್ಯೆಯನ್ನು ಬೇಗನೆ ಪರಿಹರಿಸಬೇಕು. ಸದ್ಯ ಟ್ಯಾಂಕರ್’ನಿಂದ ನೀರು ಪೂರೈಸಿ ಸಮಸ್ಯೆಯನ್ನು ನೀಗಿಸಲಾಗುತ್ತಿದೆ. ಆದರೇ, ಶೀಘ್ರದಲ್ಲೇ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.
ಬಸವಣ ಕುಡಚಿಯ ನಗರಸೇವಕ ಬಸವರಾಜ್ ಮೋದಗೆಕರ ಅವರು ಅಲಾರವಾಡ ಮತ್ತು ಬಸವಣ ಕುಡಚಿ ಲೈನ್ ಪ್ರತ್ಯೇಕಿಸಬೇಕು. ಫೆಬ್ರುವರಿಯಲ್ಲಿ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದು, ಇಲ್ಲಿಯ ವರೆಗೂ ಆಗಿಲ್ಲ. ಮೇ ತಿಂಗಳೊಳಗೆ ಸಮಸ್ಯೆ ನಿವಾರಿಸಲು ಎಲ್ ಆಂಡ್ ಟಿ ಕಂಪನಿಗ ಸಾಧ್ಯವಾಗಲಿಲ್ಲವೆಂದರೇ, ತಮ್ಮ ವಾರ್ಡನ್ನು ಎಲ್.ಆಂಡ್ ಟಿ.ಯಿಂದ ಮುಕ್ತಗೊಳಿಸಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ವಿರೋಧಿ ಪಕ್ಷದ ನಾಯಕ ಮುಜಮ್ಮುಲ್ ಢೋಣಿ ಅವರು ಕೂಡ ಎಲ್ ಆಂಡ್ ಟಿ ಕಂಪನಿಯ ಕಾರ್ಯವೈಖರಿಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ತಮ್ಮ ವಾರ್ಡನಲ್ಲಿ ವರ್ಷ ಪೈಪ್ ಅಳವಡಿಸಿ ವರ್ಷ ಕಳೆದರೂ ನೀರು ಮಾತ್ರ ಪೂರೈಸದ ಎಲ್. ಆಂಡ್ ಟಿ. ವಿರುದ್ಧ ಅಸಮಾಧಾನಗೊಂಡರು. ಇನ್ನು ನಗರಸೇವಕಿ ಸಾರೀಕಾ ಪಾಟೀಲ್ ಅವರು ತಮ್ಮ ವಾರ್ಡಿನಲ್ಲಿ ಪದೇ ಪದೇ ಕೆಟ್ಟು ನಿಲ್ಲುವ ಬೋರವೆಲ್’ಗಳನ್ನು ದುರಸ್ಥಿ ಮಾಡಲೂ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಹೊಸ ಬೋರವೆಲ್’ನ್ನು ತಮಗೆ ಹಸ್ತಾಂತರಿಸಬೇಕೆಂದು ಹೇಳಿದರು.
ಇನ್ನು ನಗರಸೇವಕರಾದ ವೀಣಾ ವಿಜಾಪುರೆ ಹಾಗೂ ನಿತೀನ್ ಜಾಧವ್ ಅವರು ರಿಸ್ಟೋರೆಶನ್ ಮತ್ತು ಹೊಸ ಕಾಮಗಾರಿಯ ಎಸ್ಟಿಮೆಟ್ ಸಿದ್ಧಪಡಿಸಲು ಮೀನ ಮೇಷ ಎನಿಸುತ್ತಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಮಹಾಪೌರರು ಮತ್ತು ಆಯುಕ್ತರು ಸಮಸ್ಯೆಗಳನ್ನು ಆದಷ್ಟು ಬೇಗನೆ ಪರಿಹರಿಸಬೇಕೆಂದು ಸೂಚನೆಯನ್ನು ನೀಡಿದರು.
ಇದಕ್ಕೂ ಮೊದಲೂ ಬೆಳಗಾವಿ ಮಹಾನಗರದಲ್ಲಿ ಬೇಸಿಗೆಯಲ್ಲಿ ಉಂಟಾಗುವ ನೀರಿನ ಸಮಸ್ಯೆಯನ್ನು ನೀಗಿಸಲು 24 ಗಂಟೆ ನೀರು ಪೂರೈಸಲು 35 ಟ್ಯಾಂಕರ್’ಗಳನ್ನು ಮಹಾಪಾಲಿಕೆಯೂ ಸಿದ್ಧಪಡಿಸಿದ್ದು, ಮಹಾಪೌರರು, ಉಪಮಹಾಪೌರರು ಮತ್ತು ನಗರಸೇವಕರು ಪರಿಶೀಲನೆಯನ್ನು ನಡೆಸಿದರು. (ಫ್ಲೋ)