ಸ್ವಾಮೀಜಿಗಳನ್ನು ರಾಜಕೀಯವಾಗಿ ಉಪಯೋಗ ಮಾಡುವ ಸಂಸ್ಕೃತಿ ನನ್ನದಲ್ಲ, ಯಾರು ಉಪಯೋಗಿಸುತ್ತಾರೆ ಅನ್ನೋದು ನಿಮಗೆ ಗೊತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಯತ್ನಾಳ್ ಅವರು, ಮಠಮಾನ್ಯಗಳಿಗೆ ದುಡ್ಡು ಕೊಟ್ಟಿದ್ದು ನಾವೇ ಅಂತ ಬಹಳ ಮಾತಾಡ್ತಾರೆ. ನಮ್ಮ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಮೂರು ಸಾವಿರ ಮಠದ ಶ್ರೀಗಳನ್ನು ಭೇಟಿಯಾಗಿದ್ದೇನೆ.
ಮೊದಲಿನಿಂದಲೂ ನಮ್ಮ ಮತ್ತು ನಮ್ಮ ಸಂಸ್ಥೆಗಳ ಮೇಲೆ ಶ್ರೀಗಳ ಆಶೀರ್ವಾದವಿದೆ. ಅದೇ ಗೌರವದೊಂದಿಗೆ ಇವತ್ತು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇನೆ. ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ನಾನು ಯಾವುದೇ ಸ್ವಾಮೀಜಿಗಳನ್ನು ರಾಜಕೀಯಕೆ, ಬಳಸಿಕೊಳಲ. ಎಂದರು.
ವಿಜಯೇಂದ್ರಗೆ ಯತ್ನಾಳ ಓಪನ್ ಚಾಲೆಂಜ್
ನೀನು ರಾಜೀನಾಮೆ ಕೊಡು,ನಾನು ರಾಜೀನಾಮೆ ಕೊಡ್ತೀನಿ. ಚುನಾವಣೆಗೆ ಹೊಗೋಣ ಎಂದು ಚಾಲೆಂಜ್ ಮಾಡಿದರು. ವಿಜಯೇಂದ್ರ ತಾಕತ್ ಇದೆಯಾ ನಾನು ಚುನಾವಣಾಗೆ ರೆಡಿ ಎಂದರು. ಕುಟುಂಬ ಮುಕ್ತ ಆದ ಮೇಲೆ ನಾನು ಬಿಜೆಪಿಗೆ ಹೋಗತಿನಿ. ಯಡಿಯೂರಪ್ಪ ಕುಟುಂಬದಿಂದ ಮುಕ್ತಿ ಆದ ಮೇಲೆ ಹೋಗುವುದಾಗಿ ಹೇಳಿದರು. ನಾನು ಒಳ್ಳೆಯವನು,ದುಷ್ಟರಿಗೆ ನಾನು ದುಷ್ಟ. ನೀವ ಅದನ್ನೆ ಬರೀರಿ ಎಂದರು.
ವಿಜಯೇಂದ್ರ ಧಮ್ ಇದ್ರೆ ನನಗೆ ನೇರವಾಗಿ ಮಾತಾಡಲಿ
ಹಂದಿಗಳ ಕಡೆ ಮಾತಾಡಸಬೇಡಾ. ಹಂದಿಗಳು ಹೊರಗೆ ಇರಬೇಕು, ಮನೆ ಒಳಗೆ ಕರಕೋಬಾರದು ಎಂದರು.
ಪರೋಕ್ಷವಾಗಿ ರೇಣುಕಾಚಾರ್ಯ ವಿರುದ್ದ ಯತ್ನಾಳ ಗರಂ ಆದರು.