Gokak

ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ಎರಡು ಕಾಲುಗಳು ಕಟ್!

Share

ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ಎರಡು ಕಾಲುಗಳು ಕಟ್ ಆದರೂ, ಆಸ್ಪತ್ರೆಗೆ ಸಾಗಿಸದೇ ಮಾನವಿಯತೆ ಮರೆತು ಮೊಬೈಲ್ ಹಿಡಿದು ವಿಚಾರಣೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ರೋಡ್ ರೈಲ್ವೆ ನಿಲ್ದಾಣ ಬಳಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ರೋಡ್ ರೈಲ್ವೆ ನಿಲ್ದಾಣ ಬಳಿ ಗೋಕಾಕ್ ತಾಲೂಕಿನ ಶಿಂಧಿಕುರಬೇಟ್ ಗ್ರಾಮದ ಹೊಳೆಪ್ಪ ಹುಲಕುಂದ ಆತ್ಮಹತ್ಯೆಗೆ ಯತ್ನಿಸಿದ. ಆದರೇ, ರೈಲು ಆತನ ಕಾಲಿನ ಮೇಲೆ ಹರಿದಿದ್ದರಿಂದ ಆತನ ಎರಡು ಕಾಲುಗಳು ಕಟ್ ಆಗಿ, ಯುವಕ ಬದುಕುಳಿದಿದ್ದಾನೆ. ರೈಲ್ವೆ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಬಂದು ಹೊಳೆಪ್ಪ ಆತ್ಮಹತ್ಯೆಗೆ ಯತ್ನಸಿದ್ದ. ಇನ್ನು ಅಧಿಕಾರಿಗಳ ವಿಚಾರಣೆ ವೇಳೆ ಹಳಿ ದಾಟುವ ವೇಳೆ ಘಟನೆಯಾಗಿದೆ ಎಂದು ಮಾಹಿತಿ ದೊರೆತಿದೆ. ಇನ್ನು ಕಾಲು ಕಟ್ ಆದರೂ, ಯುವಕನನ್ನು ಮೊದಲು ಆಸ್ಪತ್ರೆಗೆ ಸೇರಿಸುವ ಬದಲೂ ಮೊಬೈಲ್ ಹಿಡಿದು ಆತನನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Tags:

error: Content is protected !!