ಬೈಲಹೊಂಗಲ ಪಟ್ಟಣದಲ್ಲಿ ಕರ್ನಾಟಕ ಯುವರಕ್ಷಣಾ ವೇದಿಕೆಯನ್ನು ರಾಜ್ಯಾಧ್ಯಕ್ಷರಾದ ಸುನೀಲ ಎಂ ಎಸ್ ಹಾಗೂ ರಾಜ್ಯದ ಎಲ್ಲಾ ಕರ್ನಾಟಕ ಯುವ ರಕ್ಷಣಾ ವೇದಿಕೆ ಪದಾಧಿಕಾರಿಗಳ ಮುಂದಾಳತ್ವದಲ್ಲಿ ಬೈಲಹೊಂಗಲ ಪಟ್ಟಣದಲ್ಲಿ ಘಟಕವನ್ನು ಸ್ಥಾಪನೆ ಮಾಡಲಾಯಿತು

ಇದೇ ಸಂದರ್ಭದಲ್ಲಿ ಕನ್ನಡದ ಹಬ್ಬ ಕನ್ನಡದ ಕಣ್ಮಣಿ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿದ್ದರು,ಈ ಕಾರ್ಯಕ್ರಮವನ್ನು ಮೊದಲಿಗೆ ಬೈಲಹೊಂಗಲ ಘಟಕದ ಅಧ್ಯಕ್ಷರಾದ ರಾಚಪ್ಪ ಪಾಟೀಲ್ ಎಲ್ಲರನ್ನೂ ಸ್ವಾಗತ ಮಾಡಿಕೊಳ್ಳುವುದರು ಮೂಲಕ ಮತ್ತು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದರು
ಈ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಕನ್ನಡದ ಕಣ್ಮಣಿ ಪ್ರಶಸ್ತಿ ನೀಡಿದ್ದರು,ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದಂತಮಹಾಂತೇಶ್ ಆರಾದ್ರಿಮಠ ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳು ಸಾಕಷ್ಟಿದ್ದು ಅವುಗಳ ಕೆಲಸ ರಾಜ್ಯದ ನಾಡು ನುಡಿ ಭಾಷೆಗಾಗಿ ಹೋರಾಡುತ್ತಾ ಬಂದಿವೆ
ಭಾಷೆ ನೆಲ ಜಲ ಎಂದು ಬಂದರೆ ಎಲ್ಲರೂ ಕೂಡ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಯಾವುದೇ ಪರಭಾಷೆಗಳ ದಬ್ಬಾಳಿಕೆಗಳಿಗೆ ಹೆದರದೆ ನಾವು ಹೋರಾಟ ನಡೆಸಬೇಕು ಅಂದಾಗ ಮಾತ್ರ ಒಂದು ಸಂಘಟನೆ ಬೆಳೆಯಲು ಸಾಧ್ಯ ಎಂದು ಹೇಳಿದ್ದರು
ನಮ್ಮ ಕರ್ನಾಟಕದಲ್ಲಿ ಕರಾಳ ದಿನವನ್ನು ಆಚರಣೆ ಮಾಡಲಾಗುತ್ತಿತ್ತು ಅದನ್ನು ಹೋಗಲಾಡಿಸಿದ್ದು ಈ ಕರ್ನಾಟಕ ರಕ್ಷಣಾ ವೇದಿಕೆಗಳು ಹೀಗಾಗಿ ನಾವು ಈ ಎಲ್ಲಾ ರಕ್ಷಣಾ ವೇದಿಕೆಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ
ಹಾಗೆ ಈಗ ತಾನೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವಂತ ,ಈ ಸಂಘಟನೆಯ ರಾಜ್ಯಾಧ್ಯಕ್ಷರಾದಂತ ಸುನಿಲ್ ಕುಮಾರ್ ತುಂಬಾನೇ ಧೈರ್ಯಶಾಲಿ ಹಾಗೂ ಸಂಘಟನೆಯನ್ನು ಬೆಳೆಸುವುದರಲ್ಲಿ ಯಾವುದೇ ಕೂಡ ಅನುಮಾನವಿಲ್ಲ ಹಾಗೂ ಇವರು ಯುವಕನಾಗಿದ್ದು ಪ್ರತಿ ಜಿಲ್ಲೆಯಲ್ಲಿ ಕೂಡ ಪ್ರತಿ ಹಳ್ಳಿಯ ಮಟ್ಟದಲ್ಲಿ ಕೂಡ ಸಂಘಟನೆ ಬೆಳೆಸುವುದರಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಿದ್ದರು