ಅದೂ ದೂರದ ಊರಿಂದ ಮಕ್ಕಳ ಸಮೇತ ಬಂದು ಬದುಕು ಕಟ್ಟಿಕೊಳ್ಳತ್ತಿದ್ದ ಕುಟುಂಬ. ನಾಲ್ಕವರೇ ವರ್ಷದ ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟುಕೊಂಡು ಜೋಪಾನ ಮಾಡಿಕೊಂಡು ಬಂದಿದ್ದರೂ ಆ ದಂಪತಿಗಳು. ಆದರೆ ಪರ ರಾಜ್ಯ ಸೈಕೋಪಾತನ ಹೇಯ್ ಕೃತ್ಯಕ್ಕೆ ಬಾನುವಾರ ಮಗು ಬಲಿಯಾಗಿತ್ತು. ಇದರ ವಿರುದ್ಧ ಹುಬ್ಬಳ್ಳಿಗರು ದಿಟ್ಟ ಹೋರಾಟ ನಡೆಸಿದ್ದರು. ಮಗುವಿನ ಸಾವಿಗೆ ನ್ಯಾಯಬೇಕು ಎಂದು ಬೀದಿಗೆ ಇಳಿದಿದ್ದರು. ಈ ಎಲ್ಲದರ ಪ್ರತಿಫಲವಾಗಿ ಕೃತ್ಯ ಎಸಗಿದ್ದ ಕಿರಾತಕನನ್ನು ಹುಬ್ಬಳ್ಳಿ ಮಹಿಳಾ ಪಿಎಸ್ಐ ಎನ್ಕೌಂಟರ್ ಮಾಡಿ ಕಿರಾತಕನಿಗೆ ಪರಲೋಕ ತೋರಿದ್ದಾರೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ನೋಡಿ…

GFX START …
ಸ್ವೀಟ್ ಕೋಡಿಸುವ ನೆಪದಲ್ಲಿ ಮಗುವನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿ ಮಗು ಕೊಲೆ ಮಾಡಿದ ಬಿಹಾರಿ ಕಿರಾತಕ
ಬಿಹಾರಿ ಮೂಲದ ಸೈಕೋಪಾತ ರಿತೇಶನಿಂದ ನಾಲ್ಕವರೇ ವರ್ಷದ ಮಗುವಿನ ಮೇಲೆ ಹೇಯ್ ಕೃತ್ಯ ಠಾಣೆಯ ಮುಂದೆ ಜನಾಕ್ರೋಶ
ಮಾನವ ಕುಲ ತಲೆ ತಗ್ಗಿಸುವಂತೆ ಮಾಡಿದ ಕಿರಾತಕನನ್ನು ಎನ್ಕೌಂಟರ್ ಮಾಡಿ ಮಗುವಿನ ಆತ್ಮಕ್ಕೆ ಶಾಂತಿ ನೀಡಿದ ಮಹಿಳಾ ಪಿಎಸ್ಐ ಅನ್ನಪೂರ್ಣ
ತಮ್ಮ ಕಷ್ಟದ ನಡುವೆಯೂ ಇಷ್ಟಪಟ್ಟು ಬೆಳಸಿದ ಮಗುವನ್ನು ಕಳೆದುಕೊಂಡು ಪರದಾಡುತ್ತಿರುವ ದಂಪತಿಗಳು… ಮಗುವನ್ನು ಕಳೆದುಕೊಂಡ ದಂಪತಿಗಳ ನ್ಯಾಯಕ್ಕಾಗಿ ಠಾಣೆಯ ಮುಂದೆ ಜನಾಕ್ರೋಶ.. ಮಗದೊಂದು ಕಡೆ ನಾಲ್ಕವರೇ ವರ್ಷದ ಮಗುವಿನ ಮೇಲೆ ನೀಚ ಕೃತ್ಯ ಮಾಡಲು ಯತ್ನಿಸಿ ಪೊಲೀಸರ ಎನ್ಕೌಂಟರಗೆ ಪರಲೋಕಕ್ಕೆ ಪಾರ್ಸಲ್ ಆದ ಪರ ರಾಜ್ಯದ ಸೈಕೋಪಾತ…ಎಸ್ ಹೀಗೆ ಮಹಿಳಾ ಪಿಎಸ್ಐ ಅನ್ನಪೂರ್ಣರಿಂದ ಪರಲೋಕಕ್ಕೆ ಪಾರ್ಸಲ್ ಆಗಿರೋ ಕಿರಾತಕನ ಹೆಸರು ರಿತೇಶ ಅಂತಾ. ಇತ ಮೂಲತಃ ಬಿಹಾರಿ, ಆದರೆ ಇತನ ಹೇಯ್ ಕೃತ್ಯಕ್ಕೆ ಹುಬ್ಬಳ್ಳಿಗರಷ್ಟೇ ಅಲ್ಲದೇ ದೇಶದ ಪ್ರತಿಯೊಬ್ಬ ಪಾಲಕರು ಹಿಡಿಶಾಪ ಹಾಕಿ ಇತನಿಗೆ ಎನ್ಕೌಂಟರ್ ಸರಿಯಾದ ಶಿಕ್ಷೆ ಎನ್ನುತ್ತಿದ್ದರು.
ಹೌದು ಹೀಗೆ ಕೀಮ್ಸ್ ಆಸ್ಪತ್ರೆಯಲ್ಲಿ ಮಹಿಳಾ ಪಿಎಸ್ಐ ದಿಟ್ಟ ಹೆಜ್ಜೆಯಿಂದ ಸತ್ತು ಮಲಗಿರೋ ಈ ಕಿರಾತಕ ರಿತೇಶ. ತನ್ನ ಕಾಮ ತೀಟೆ ತಿರಿಸಿಕೊಳ್ಳಲು. ಮಗವನ್ನು ಸ್ವೀಟ್ ಆಸೆ ತೋರಿಸಿ ಹುಬ್ಬಳ್ಳಿ ಸಂತೋಷ ನಗರದ ನಿರ್ಜನ ಶೆಡ್ ಗೆ ಕರೆದುಕೊಂಡು ಹೊಗಿದ್ದಾನೆ. ಮಗುವನ್ನು ಕರೆದುಕೊಂಡು ಹೋಗುತ್ತಿರುವ ದೃಶ್ತಗಳು ಸ್ಥಳೀಯ ಸಿಸಿಟಿಯಲ್ಲಿ ಸೆರೆಯಾಗಿತ್ತು. ಇನೇನೂ ಮಗುವಿನ ಮೇಲೆ ತನ್ನ ಹೇಯ್ ಕೃತ್ಯ ಮಾಡಲಾರಂಭಿಸಿದ್ದಾ ಈ ಕಿರಾತಕ ರಿತೇಶ, ಅಷ್ಟರಲ್ಲಿ ಸ್ಥಳಿಯರಿಗೆ ಮಗುವಿನ ಕಿರಿಚಾಟ ಕೇಳಿದೆ. ಇನ್ನೇನೂ ಮಗು ಬದುಕಿಸಿಕೊಳ್ಳಬೇಕು ಎಂದು ಓಡೋಡಿ ಬಂದಿದ್ರೂ ಸ್ಥಳೀಯರು, ತನ್ನ ಹೀನ ಕೃತ್ಯ ಹೊರ ಬರುತ್ತೆ ಎಂಬ ಭಯದಲ್ಲಿಯೇ ಪ್ರಪಂಚದ ಪರಿಚಯ ಆಗುವ ಮುನ್ನವೇ ಕಿರಾತಕ ಮಗುವನ್ನು ಬಲಿ ಪಡೆದಿದ್ದನ್ನು. ಮಗುವನ್ನು ಕಾಪಾಡುವುದ್ಕೆ ಹೋಗುಷ್ಟರಲ್ಲಿ ಮಗು ಜೀವ ಕಳೆದುಕೊಂಡು ಕುಳಿತಿತ್ತು.
ಕೂಡಲೇ ಸ್ಥಳೀಯರು ಹುಬ್ಬಳ್ಳಿ ಅಶೋಕ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವಿನ ಮೃತ ದೇಹವನ್ನು ಕೀಮ್ಸ್ ಆಸ್ಪತ್ರೆಗೆ ರವಾನೆ ಮಾಡಿ ಕಿರಾತಕ ಆರೋಪಿ ರಿತೇಶನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದರು. ಅಷ್ಟೋತ್ತಿಗಾಗ್ಲೇ ಮಗುವಿನ ಮೇಲೆ ಪರ ರಾಜ್ಯದ ಕಿರಾತಕನ ಕೃತ್ಯ ಹೊರ ಬಿದಿತ್ತು. ಈ ಕೃತ್ಯಕ್ಕೆ ಹುಬ್ಬಳ್ಳಿಗರು ಆಕ್ರೋಶಗೊಂಡು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಮಗುವಿನ ಮೇಲೆ ಹೇಯ್ ಕೃತ್ಯ ನಡೆಸಲು ಮುಂದಾಗಿ ಕೊಲೆ ಮಾಡಿದ ಆರೋಪಿ ನಮ್ಮಗೆ ಒಪ್ಪಿಸಿ ಎಂದು ಆಗ್ರಹಿಸಿದರು.
ಇನ್ನೂ ಪ್ರಕರಣ ಭೀಕರತೆ ಹಾಗೂ ಜನಾಕ್ರೋಶ ತಿಳಿದು ಬೇರೊಂದು ಬಂದೋಬಸ್ತನಲ್ಲಿದ್ದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಅಶೋಕ ನಗರ ಠಾಣೆಗೆ ಬಂದು ಒ್ರಕರಣದ ಕುರಿತು ಮಾಹಿತಿ ಪಡೆದುಕೊಂಡು ಪ್ರತಿಭಟನಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಇದಕ್ಕೆ ಜಗ್ಗದ ಜನ ಪ್ರತಿಭಟನೆ ಮುಂದುವರೆಸಿ ಆರೋಪಿಗೆ ತಕ್ಕ ಶಿಕ್ಷೆ ಕೋಡಲು ಆಗ್ರಹಿಸಿದರು. ಒಂದು ಕಡೆ ಸಮಯ ಕಳೆಯುತ್ತಿದಂತೆ ಹುಬ್ಬಳ್ಳಿಯಲ್ಲಿ ಕೀಚಕನ ಹೇಹ್ ಕೃತ್ಯಕ್ಕೆ ಪ್ರತಿಭಟನೆ ಆಕ್ರೋಶಗಳು ಹೆಚ್ಚಾಗ ತೋಡಗಿದ್ದವು. ಇದರ ಎಲ್ಲದರ ಮದ್ಯ ತನಿಖೆಗೆ ಇಳಿದ ಅಶೋಕ ನಗರ ಪೊಲೀಸರು ಠಾಣೆಯಲ್ಲಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ, ಕಾನೂನು ಕ್ರಮಕ್ಕೆ ಮುಂದಾಗಿ ಆರೋಪಿಯಿಂದ ಸ್ಥಳ ಮಹಜರಿಗೆ ಮುಂದಾಗಿದ್ದರು. ಆದರೆ ಈ ಪರ ರಾಜ್ಯದ ಕಿರಾತಕ ಸ್ಥಳ ಮಹಜರಿಗೆ ತೆರಳಿದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಕೂಡಲೇ ಅಲರ್ಟ್ ಆದ ಠಾಣೆಯ ಮಹಿಳಾ ಪಿಎಸ್ಐ ಅನ್ನಪೂರ್ಣ ಅವರು ಆರೋಪಿಗೆ ಗುಂಡೇಟು ನೀಡಿದ್ದಾರೆ. ಪೊಲೀಸ್ ಗುಂಡು ಆರೋಪಿಯ ಬೆನ್ನಿಗೆ ಬಿದ್ದು ಎದೆಯ ಭಾಗಕ್ಕೆ ನುಗ್ಗಿದೆ ಆರೋಪಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಬರೋ ಮುನ್ನ ಸಾವನಪ್ಪಿದ್ದು, ಮಹಿಳಾ ಪಿಎಸ್ಐ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ಪೊಲೀಸ್ ಫೈರಿಂಗ್ ಕುರಿತು ಕಮಿಷನರ್ ಹೇಳಿದು ಹೀಗೆ. ವಿಷಯ ತಿಳಿದು ಕೀಮ್ಸ್ಗೆ ಭೇಟಿ ನೀಡಿ ಕೇಂದ್ರ ಸಚಿವರು ಕಿರಾತಕ ಕೃತ್ಯ ಮಗುವಿನ ತಂದೆ ತಾಯಿಯಿಂದ ಕೇಳಿ ಕಣ್ಣೀರು ಹಾಕಿ, ಪರಿಹಾರ ಭರವಸೆ ನೀಡಿದರು.
ಇನ್ನೂ ಮಗುವಿನ ತಂದೆ ತಾಯಿಗೆ ಆದ ಅನ್ಯಾಯಕ್ಕೆ ದಿಟ್ಟ ಹೋರಾಟ ನಡೆಸಿದ ಹುಬ್ಬಳ್ಳಿಗರು ಆರೋಪಿಗೆ ಮಹಿಳಾ ಪಿಎಸ್ಐ ಅನ್ನಪೂರ್ಣ ಅವರು ತಕ್ಕ ಶಿಕ್ಷೆ ನೀಡಿದ್ದಾರೆ ಎನ್ನುತ್ತಿದ್ದು, ಗಾಯಾಳು ಪೊಲೀಸರನ್ನು ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೀಮ್ಸ್ ಭೇಟಿ ನೀಡಿದ ಶಾಸಕಪ್ರಸಾದ್ ಅಬ್ಬಯ್ಯ ಪರ ರಾಜ್ಯದ ವ್ಯಕ್ತಿಯ ಕೃತ್ಯವನ್ನು ಖಂಡಿಸಿ, ಪೊಲೀಸರು ಸರಿಯಾಗಿ ನಡೆದುಕೊಂಡಿದ್ದಾರೆ ಎನ್ನುವ ಮೂಲಕ ಆರೋಪಿ ಮೇಲಿನ ಫೈರಿಂಗ್ ಶ್ಲಾಘಿಸಿದರು. ಸಮಾಜದಲ್ಲಿ ಎಲ್ಲರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಅಂದಾಗ ಇಂತಹ ಘಟನೆಗಳನ್ನು ತಡೆಯಲು ಸಾಧ್ಯ. ಮಗು ಕಳೆದುಕೊಂಡ ಬಡ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು.
ಒಟ್ಟಿನಲ್ಲಿ ಸೈಕೋಪಾತ್ ಆರೋಪಿಗೆ ಹುಬ್ಬಳ್ಳಿ ಅಶೋಕ ನಗರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಅನ್ನಪೂರ್ಣ ಅವರು ಆತ್ಮರಕ್ಷಣೆಗೆ ಫೈರಿಂಗ್ ಮಾಡಿ ದಿಟ್ಟ ಹೆಜ್ಜೆ ಇಟ್ಟಿದ್ದು, ಇಡೀ ಹುಬ್ಬಳ್ಳಿ ಹಾಗೂ ರಾಜ್ಯದ ಜನರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಬಿಹಾರ ಮೂಲದ ಈ ಸೈಕೋಪಾತ್ ಮೂವತೈದು ವರ್ಷದ ರಿತೇಶನ ಕೃತ್ಯಕ್ಕೆ ಹುಬ್ಬಳ್ಳಿ ಪೊಲೀಸರು ತಕ್ಕ ಉತ್ತರ ನೀಡಿದ್ದು, ಹೇಯ್ ಕೃತ್ಯದಲ್ಲಿ ಭಾಗಿಯಾಗುವವರಿಗೆ ಒಳ್ಳೆಯ ಸಂದೇಶ ರವಾನಿಸಿದ್ದಾರೆ.