Belagavi

ಮೊಬೈಲ್ ಶೌಚಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್, ಸಂಗೋಳ್ಳಿ ರಾಯಣ್ಣ ಭಾವಚಿತ್ರ

Share

ಮೊಬೈಲ್ ಶೌಚಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್, ಸಂಗೋಳ್ಳಿ ರಾಯಣ್ಣ ಭಾವಚಿತ್ರ ಪರದೆ ಅಳವಡಿಸಿ ಅಪಮಾನ ಮಾಡಿದ ಘಟನೆ ಬೆಳಗಾವಿಯ ಅನಗೋಳ ಡಾ. ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ಬೆಳಗಾವಿಯ ಅನಗೋಳ ಡಾ. ಅಂಬೇಡ್ಕರ್ ನಗರದ ಹೊರವಲಯದಲ್ಲಿರುವ ಎಸ್.ಕೆ.ಇ ಸೊಸೈಟಿಯ ಮೈದಾನದಲ್ಲಿ ಪಾರಾಯಣ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮಕ್ಕೆ ಬರೋ ಜನರಿಗೆ ಅಂಬೇಡ್ಕರ್ ನಗರದ ಸ್ಮಶಾನದಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಈ ಮೊಬೈಲ್ ಶೌಚಾಲಯಕ್ಕೆ ಸುತ್ತಲಿನ ಪರದೆಗೆ ಮಹನೀಯರ ಭಾವಚಿತ್ರ ಅಳವಡಿಸಿ ಅಪಮಾನ ಮಾಡಲಾಗಿದೆ.
ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವದ ಬ್ಯಾನರ್ ಗಳನ್ನೇ ಮೊಬೈಲ್ ಶೌಚಾಲಯ ಮಾಡಿದ ಆರೋಪ ಕೇಳಿ ಬಂದಿದೆ. ಮೊಬೈಲ್ ಶೌಚಾಲಯಕ್ಕೆ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ, ಎಐಸಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ,

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ, ಸಚಿವ ಸತೀಶ ಜಾರಕಿಹೊಳಿ ಭಾವಚಿತ್ರಗಳ ಪರದೆ ಅಳವಡಿಕೆ ಮಾಡಲಾಗಿದೆ. ಮೊಬೈಲ್ ಶೌಚಾಲಯಕ್ಕೆ ಗಾಂಧಿ ಅಧಿವೇಶನದ ಶತಮಾನೋತ್ಸವದ ಅಂಬೇಡ್ಕರ್ ಬ್ಯಾನರ್ ಅಳವಡಿಕೆಗೆ ದಲಿತ ಸಮುದಾಯದ ಯುವಕರಿಂದ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಸಮುದಾಯದ ಯುವಕರು ತಡರಾತ್ರಿ ಟಿಳಕವಾಡಿ ಪೊಲೀಸ ಠಾಣೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೇ ಆರೋಪಿಗಳ ವಿರುದ್ಧ ದೂರು ಪಡೆದುಕೊಳ್ಳಲು ಪೊಲೀಸರ ಹಿಂದೇಟು ಹಾಕಿದ ಆರೋಪ ಕೇಳಿ ಬಂದಿದೆ.

ಸ್ಥಳದಲ್ಲೇ ಬಿಗುವಿನ ವಾತಾವರಣ ಹಿನ್ನೆಲೆ ತಡರಾತ್ರಿ ಶೌಚಾಲಯವನ್ನು ಟಿಳಕವಾಡಿ ಪೊಲೀಸರು ತೆರುವುಗೊಳಿಸಿದ್ದಾರೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್,ಟಿಳಕವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲೇ ಬಿಗಿಪೊಲೀಸ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

Tags:

error: Content is protected !!