Vijaypura

ಯತ್ನಾಳ ಸ್ವ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ: ಜನಾಕ್ರೋಶ ಯಾತ್ರೆಯಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ ಜಿಲ್ಲೆಯ ಜನಪ್ರತಿನಿಧಿಗಳು

Share

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಬಳಿಕ ಮೊದಲ ಬಾರಿಗೆ ವಿಜಯಪುರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗಮಿಸಿದ್ದರು. ವಿಜಯೇಂದ್ರ ಅವರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಯಾತ್ರೆಯಲ್ಲಿ ಹೆಚ್ಚಿನ ಜನರು ಸೇರಲ್ಲ ಯತ್ನಾಳ ಬೆಂಬಲಿಗರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಎನ್ನಲಾಗಿತ್ತು. ಇದರ ಮದ್ಯೆ ಹೆಚ್ಚಿನ ಜನರು ಕೂಡಾ ಯಾತ್ರೆಯಲ್ಲಿ ಪಾಲ್ಗೊಂಡರೆ. ಯತ್ನಾಳ ಬೆಂಬಲಿಗರಾರು ಯಾತ್ರೆಗೆ ವಿರೋಧ ವ್ಯಕ್ತಪಡಿಸಲಿಲ್ಲ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು ವಿಜಯಪುರ ನಗರದಲ್ಲಿ ಇಂದು ಬಿಜೆಪಿ ಪಕ್ಷದ ವತಿಯಿಂದ ಜನಾಕ್ರೋಶ ರ‌್ಯಾಲಿ ಆಯೋಜನೆ ಮಾಡಲಾಗಿತ್ತು ವಿಜಯಪುರ ನಗರದ ಶಿವಾಜಿ ವೃತ್ತದಿಂದ ದರಬಾರ ಹೈಸ್ಕೂಲ್ ಮೈದಾನದ ವರೆಗೆ ಬೃಹತ್ ರ‌್ಯಾಲಿ ಆಯೋಜನೆ ನಡೆಸಿದ್ದರು. ರಾಜ್ಯ ಸರ್ಕಾರದ ಬೆಲೆ ಏರಿಕೆ ಸೇರಿದಂತೆ ಹಲವು ವಿಚಾರಗಳನ್ನು ಖಂಡಿಸಿ ಯಾತ್ರೆ ಹಮ್ಮಿಕೊಂಡಿದ್ದರು. ನಗರದ ಶಿವಾಜಿ ವೃತ್ತದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರ‌್ಯಾಲಿಗೆ ಚಾಲನೆ ನೀಡಿದರು. ಮೆರವಣಿಗೆ ಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಇನ್ನೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ಪಕ್ಷದಿಂದ ಉಚ್ಚಾಟನೆಯಾದ ಬಳಿಕ ಮೊದಲ ಬಾರಿಗೆ ಬಿಜಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗಮಿಸುತ್ತಿರುವ ಕಾರಣ ಎಲ್ಲಿಯಾದರೂ ಗಲಾಟೆಯಾಗಬಹುದು ಎಂಬ ಕಾರಣಕ್ಕೆ ನಗರದಾದ್ಯಂತ ಬಿಗಿ ಪೋಲಿಸ್ ಬಂದೋ ಬಸ್ತ ನಿಯೋಜನೆ ಮಾಡಲಾಗಿತ್ತು. ಇನ್ನೂ ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮ ದ ವೇದೆಕೆ ಮೇಲೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಚಲುವಾದಿ ನಾರಾಯಣ ಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು…

ಇನ್ನೂ ಜನಾಕ್ರೋಶದ ಜ್ಯೋತಿಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಗುರುಲಿಂಗಪ್ಪ ಅಂಗಡಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಹಸ್ತಾಂತರ ಮಾಡುವ ಮೂಲಕ‌ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಬಹಿರಂಗ ಸಮಾವೇಶಕ್ಕೆ ಚಾಲನೆ ನೀಡಿದರು. ಇನ್ನೂ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ವಾಟನೆ ಮಾಡಲಾಗಿದೆ. ಹೀಗಾಗಿ ಈ ಬಾರಿ ಜನ ಸೇರಲ್ಲ ಎನ್ನಲಾಗಿತ್ತು. ಆದರೆ ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ ಜನರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇನ್ನೂ ವೇದಿಕೆಯ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮುಂಚಿತವಾಗಿ ಯಾರೂ‌ ಕೂಡಾ ಯತ್ನಾಳ ವಿಚಾರವಾಗಿ ಮಾತನಾಡಬಾರದು ಎಂಬ ಖಡಕ್ ಸೂಚನೆ ನೀಡಿದ್ದರು ಹೀಗಾಗಿ ವೇದಿಕೆಯ ಮೇಲೆ ಮಾತನಾಡಿದ ಯಾವೊಬ್ಬ ಮುಖಂಡರು ಯತ್ನಾಳ ಅವರ ವಿಚಾರವಾಗಿ ಪ್ರಸ್ತಾಪ ಮಾಡಲೇ ಇಲ್ಲ, ಇನ್ನು ಸಂಸದ ರಮೇಶ ಜಿಗಜಿಣಗಿ ಸೂಕ್ಷ್ಮವಾಗಿ ಮಾತನಾಡಿ ಪಕ್ಷ ದೊಡ್ಡದು ಪಕ್ಷಕ್ಕೆ ಜಿಗಜಿಣಗಿ ಅನಿವಾರ್ಯ ಅಲ್ಲ, ಜಿಗಜಿಣಗಿ ಇರದಿದ್ದರೂ ಪಕ್ಷ ಗಟ್ಟಿಗೊಳಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಅಪರೋಕ್ಷವಾಗಿ ಯತ್ನಾಳ ವಿಚಾರವಾಗಿ ಹೇಳಿದರು.

ಇದೇ ವೇಳೆ ಮಾತನಾಡಿದ ವಿಜಯೇಂದ್ರ ಜನಾಕ್ರೋಶ ಯಾತ್ರೆಯಲ್ಲಿ 15 ರಿಂದ 20 ಸಾವಿರ ಜನರು ಭಾಗವಹಿಸಿದ್ದೀರಿ, ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ರುಣಿಯಾಗಿದ್ದೇನೆ. ಇಂದು ವೇದಿಕೆ ಮೇಲೆ ಎಲ್ಲರೂ ಕೂತಿದ್ದಾರೆ ಎಂದರೆ ಇವರು ವೇದಿಕೆ ಮೇಲೆ ಕೂಡಲು ಕಾರಣವೇ ನಮ್ಮ ಪಕ್ಷದ ಕಾರ್ಯಕರ್ತರು. ನಾನು ನಿರಿಕ್ಷೆ ಮಾಡಿರಲಿಲ್ಲ ಇಷ್ಟೋಂದು ಜನ ಅದ್ದೂರಿಯಾಗಿ ಸ್ವಾಗತ ಕೋರುತ್ತಾರೆ ಎಂದು. ಈ ವೇದಿಕೆಯ ಮೂಲಕ ಸಿಎಂ ಗೆ ಸವಾಲ ಹಾಕುವೆ, ಜನಾಕ್ರೋಶ ಈ ರಾಜ್ಯದ ಸರ್ಕಾರ ಹಾಗೂ ಸಿಎಂ ವಿರುದ್ದ ಇದೆ ಎಂದು ತಿಳಿದುಕೊಳ್ಳಬೇಕು ಎಂದರೆ ಇಂದು ವಿಜಯಪುರಕ್ಕೆ ಬಂದು ನೋಡಿ. ಕಳೆದ ವಿಧಾನ‌ಸಭಾ ಚುನಾವಣೆಯಲ್ಲಿ ಎಲ್ಲರಿಗೂ ನ್ಯಾಯ ಕೊಡುತ್ತವೆ ಎಂದು ಹೇಳಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಅಹಿಂದಾ ಹೆಸರು ಹೇಳಿಕೊಂಡು ಅಧಿಕಾರ ನಡೆಸುತ್ತಿರುವ ಸಿಎಂ‌ ಅವರು ಬಳಿಕ ರಾಜ್ಯದಲ್ಲಿರುವ ಹಿಂದುಳಿದ ಸಮುದಾಯ ಸಂಪೂರ್ಣವಾಗಿ ನಿರ್ಲಕ್ಷ ಮಾಡಿ ಮುಸ್ಲಿಂ ‌ಮರಿಗಾಗಿ ನಿಂತರು. 4% ಮುಸ್ಲಿಂಮರಿಗೆ ಗುತ್ತಿಗೆಯಲ್ಲಿ ರಿಸರ್ವೇಶನ್ ಕೊಡುತ್ತೇವೆ ಎನ್ನುತ್ತಾರೆ. ಸಿದ್ದರಾಮಯ್ಯ ನೀವು ರಾಜ್ಯದ ಮುಖ್ಯಮಂತ್ರಿಯೋ‌ ಮುಸ್ಲಿಂ ಮುಖ್ಯಮಂತ್ರಿಯೋ. ಇಂದು ತ್ರೀಬಲ್ ತಲಾಕ್ ಕಿತ್ತು ಹಾಕುವ ಕೆಲಸ ಹೆಮ್ಮೆಯ‌ ಪ್ರಧಾನಿ ಮಾಡಿದರು, ಬಿಜೆಪಿ ಪಕ್ಷ ಮುಸ್ಲಿಂ ಮರ ವಿರೋದಿಯಲ್ಲ ಎಂದು ಹೇಳುವ ಮೂಲಕ‌ ಸಿದ್ದರಾಮಯ್ಯ ವಿರುದ್ದ ವಿಜಯೇಂದ್ರ ವಾಗ್ದಾಳಿ‌ ನಡೆಸಿದರು…

ಯತ್ನಾಳ ಭದ್ರ ಕೋಟೆಯಲ್ಲಿ ಜನಾಕ್ರೋಶ ರ‌್ಯಾಲಿ ಮಾಡುವ ಮೂಲಕ‌ ಬಿಜೆಪಿ ಇನ್ನೂ‌ ಜಿಲ್ಲೆಯಲ್ಲಿ ಗಟ್ಟಿಯಾಗಿದೆ ಎಂದು ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳು ಇಂದು ನಡೆದ ಕಾರ್ಯಕ್ರಮದ ಮೂಲಕ ತೋರಿಸಿ ಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಯತ್ನಾಳ ಉಚ್ಚಾಟನೆ ಬಿಜೆಪಿ ಪಕ್ಷದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದುನ್ನು ಕಾದು ನೋಡಬೇಕಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ…

Tags:

error: Content is protected !!