Bagalkot

ಹೆಚ್ಚುತ್ತಿರುವ ಬಿಸಿಲಿನ ಬೇಗೆ…ನದಿಯಿಂದ ಹೊರ ಬರುತ್ತಿರುವ ಮೊಸಳೆಗಳು

Share

ಒಂದೆಡೇ ಬಿಸಿಲಿನ ಶಾಖ ಹೆಚ್ಚಾಗುತ್ತಿದೆ. ಇನ್ನೊಂದೆಡೆ ನದಿ ನೀರು ಬತ್ತುತ್ತಿದೆ. ಈ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಗಲಗಲಿ ಸಮೀಪದ ರಬಕವಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕವನ್ನು ಸೃಷ್ಟಿಸಿದೆ.

ದಿನೇ ದಿನೇ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಇದರಿಂದಾಗಿ ಕೃಷ್ಣಾ ನದಿ ನೀರಿನ ಮಟ್ಟ ಕಡಿಮೆಯಾಗಿದ್ದರಿಂದ ಆಹಾರವನ್ನು ಅರಸಿ, ಬಾಗಲಕೋಟೆ ಜಿಲ್ಲೆಯ ಗಲಗಲಿ ಸಮೀಪದ ರಬಕವಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ನದಿಯಿಂದ ಹೊರ ಬರುತ್ತಿರೋ ಬೃಹದಾಕಾರದ ಮೊಸಳೆಗಳನ್ನು ಕಂಡು ಜನರು ಭಯಭೀತರಾಗಿದ್ದಾರೆ. ಕೃಷ್ಣಾ ನದಿಯಲ್ಲಿ ನೀರು ವಿರಳವಾಗುತ್ತಿದ್ದಂತೆ ಮೊಸಳೆಗಳ ಕಾಟ ಹೆಚ್ಚಾಗಿದೆ.

ಗಲಗಲಿ ಗ್ರಾಮದ ಸುರೇಶ ಗುಮ್ಮಡಿ ಎಂಬುವವರ ಹೊಲದಲ್ಲಿ ಕಾಣಿಸಿಕೊಂಡ ಈ ಮೊಸಳೆಯನ್ನು ಸ್ಥಳೀಯರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಇನ್ನು ಮೊಸಳಗಳಿಂದ ಸುರಕ್ಷಿತವಾಗಿರುವಂತೆ ಸಂದೇಶವನ್ನು ಅರಣ್ಯ ಇಲಾಖೆಯವರು ನೀಡಿದ್ದಾರೆ.

Tags:

error: Content is protected !!