ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಚರ್ಚೆಯಾಗುವ ಸಂದರ್ಭದಲ್ಲಿ ಯಾವುದೇ ರೀತಿಯಿಂದ ಗಲಾಟೆ ಆಗಿಲ್ಲ, ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಲ್ಲಿ ಯಾವುದೇ ರೀತಿಯಿಂದ ಗಲಾಟೆ ಆಗಿಲ್ಲ, ಜಾತಿಗಣತಿ ಸಂದರ್ಭದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಸೂಚನೆ ನೀಡಿದ್ದೇವೆ. ನಮ್ಮಲ್ಲಿ ಯಾವುದೇ ರೀತಿಯಿಂದ ಗಲಾಟೆ ಆಗಿಲ್ಲ ಎಂದು ವಿಜಯಪುರದಲ್ಲಿ ಶುಕ್ರವಾರದಂದು ಸಚಿವ ಎಂ ಬಿ ಪಾಟೀಲ್ ಮಾಧ್ಯಮಕ್ಕೆ ಹೇಳಿಕೆ ನೀಡಿದರು.

ಇನ್ನೂ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿಯ ಲೋಪದೋಷಗಳನ್ನು ಸಮುದಾಯದ ಸಚಿವರುಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಇನ್ನೊಮ್ಮೆ ಪರಿಶೀಲನೆ ಮಾಡಿ ಸರಿಯಾದ ರೀತಿಯಲ್ಲಿ ಜಾತಿಗಳಂತೆ ಮಾಡಬೇಕು ಎಂದು ಕೆಲವು ಸಚಿವರುಗಳು ಧ್ವನಿ ಎತ್ತಿದ್ದೇವೆ. ಬರುವ ಮೇ 2ರಂದು ಇದರ ಕುರಿತು ಇನ್ನೊಂದು ಸಭೆ ಮಾಡಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಎಂದು ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ್ ತಿಳಿಸಿದರು.