hubbali

ಹುಬ್ಬಳ್ಳಿಯಲ್ಲಿ ಮಗು ಹತ್ಯೆ ಊಹಿಸಲಾರದಂತ ಘಟನೆ : ಶಾಸಕ ಟೆಂಗಿನಕಾಯಿ

Share

ಹುಬ್ಬಳ್ಳಿಯಲ್ಲಿ ಸೈಕೋಪಾತಕನಿಂದ ಕೊಲೆಯಾದ ಬಾಲಿಕಿ ಮನೆಗೆ ಇಂದು ಶಾಸಹ ಮಹೇಶ್ ಟೆಂಗಿನಕಾಯಿ ಭೇಟಿನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಅವರು ಬಾಲಕಿ ಹತ್ಯೆಗೈದ ಆರೋಪಿ ಎನ್‌ಕೌಂಟ‌ರ್ ಪ್ರಕರಣ, ಯಾರೂ ಸಹ ಇಂತಹ ಘಟನೆಯ ಬಗ್ಗೆ ಊಹಿಸಿರಲಿಲ್ಲ. ಬಾಲಕಿ ಹತ್ಯೆಯಾದಾಗ ನಮ್ಮ ಆಗ್ರಹ ತ್ವರಿತಗತಿಯಲ್ಲಿ ನ್ಯಾಯ ಸಿಗಬೇಕೆಂದು. ಅದೇ ರೀತಿ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆಂದು ಎಂದರು. ಈ ಹಿಂದೆ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಘಟನೆ ಆದಾಗ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ.

ಹುಬ್ಬಳ್ಳಿ-ಧಾರವಾಡ ಪೊಲೀಸರು ಬಾಲಕಿ ಸಾವಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ, ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.

Tags:

error: Content is protected !!