ಜಾತಿ ಗಣತಿಯಲ್ಲಿ ಗಡಿಬಿಡಿಯಲ್ಲಿ ಜಾರಿ ಮಾಡುತ್ತಿಲ್ಲ. ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ. ಹಲವಾರು ಸಭೆ ನಡೆಸಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅದನ್ನ ಒಮ್ಮತದಿಂದ ಜಾರಿಗೊಳಿಸಲಾಗುವುದೆಂದು ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಅಪೂರ್ಣವಾಗಿಲ್ಲ. ಅದು ಇಂದು ನಾಳೆ ಅಂತಲ್ಲ. ಒಂದು ವರ್ಷದ ವರೆಗೂ ಅಂತಿಮವಾಗಬಹುದು. ಜಟಿಲವಾದ ಸಮಸ್ಯೆಯಿದೆ. ಹಲವಾರು ಬಾರಿ ಸಭೆ ಕರೆದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ. ಎಲ್ಲ ಒಮ್ಮತದಿಂದ ಜಾರಿಗೊಳಿಸಲಾಗುವುದು ಎಂದರು.
ಇನ್ನು ಸಚಿವರಲ್ಲಿನ ಭಿನ್ನಾಭಿಪ್ರಾಯಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅಂಕಿ ಅಂಶಗಳ ಕುರಿತು ಸ್ವಲ್ಪ ಗೊಂದಲಗಳಾಗಿವೆ. ವರದಿಗೆ ಸಂಬಂಧಿಸಿದಂತೆ ಸಹಿ ಮಾಡಿದವರೇ , ಈಗ ವಿರೋಧ ಮಾಡುತ್ತಿದ್ದಾರೆ. ಸಮಗ್ರ ಚರ್ಚೆ ಮಾಡಿ, ಜಾರಿಗೊಳಿಸಬಹುದು. ಗಡಿಬಿಡಿ ಮಾಡುವ ಅವಶ್ಯಕತೆಯಿಲ್ಲ ಎಂದರು.