Vijaypura

ಶಾಸಕ ಯತ್ನಾಳ ಉಚ್ಚಾಟನೆ ನೋವಾಗಿದೆ: ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ

Share

ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಉಚ್ಚಾಟನೆಯಿಂದ ನನಗೆ ವೈಯಕ್ತಿಕವಾಗಿ ತುಂಬಾ ನೋವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು. ಮಂಗಳವಾರದಂದು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಶಾಸಕ ಯತ್ನಾಳ ಬಿಜೆಪಿ ಕುಟುಂಬ ಸದಸ್ಯರು ಅವರ ಉಚ್ಚಾಟನೆಯಿಂದ ನೋವಾಗಿದೆ,

ಇದರಲ್ಲಿ ಯತ್ನಾಳ ತಪ್ಪು ಇದೆ ಬಿಜೆಪಿ ಪಕ್ಷದ ನಾಯಕರ ಬಗ್ಗೆ ರಸ್ತೆಯಲ್ಲಿ ನಿಂತು ಮಾತನಾಡುವುದು ತಪ್ಪು. ಇದನ್ನು ಅರಿತು ಬಿಜೆಪಿ ಹೈಕಮಾಂಡ್ ಅವರನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಹೇಳಿದರು.

Tags:

error: Content is protected !!