ಬೆಳಗಾವಿಯ ವಡಗಾಂವನಲ್ಲಿ ನೇಕಾರ ಸಮಾಜದ ವತಿಯಿಂದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿಯ ನಿಮಿತ್ಯ ವಿಜೃಂಭಣೆಯ ಮೆರವಣಿಗೆ ನಡೆಯಿತು.ಶಾಸಕರಾದ ಅಭಯ್ ಪಾಟೀಲ ಹಾಗೂ ಅವರ ಕಾರ್ಯಕರ್ತರು ಹುಮ್ಮಸ್ಸಿನಿಂದ ಮೆರವಣಿಗೆಯ ವಾದ್ಯಗಳಿಗೆ ಹೆಜ್ಜೆ ಹಾಕಿದರು. ಭಾವಚಿತ್ರದ ಧ್ವಜಗಳು ಭವ್ಯ ಮೆರವಣಿಗೆ ಆದ್ಯ ವಚನಕಾರ, ನೇಕಾರ ಸಂತನನ್ನು ನೆನಪು ಮೆಲುಕು ಹಾಕುವಂತಿತ್ತು, ಆಧ್ಯಾತ್ಮ , ಜ್ಮಾನ, ಶ್ರಮ ಮತ್ತು ಸಮಾನತೆ, ಕಾಯಕ ತತ್ವದಡಿಯಲ್ಲಿ ನಿಂತು ಶರಣ ಸಂಸ್ಕೃತಿಯ ವಚನ ಸಾಹಿತ್ಯಕ್ಕೆ ನಾಂದಿಹಾಡಿದ ಮಹಾನ ದಾರ್ಶನಿಕನ ಜಯಂತಿ ಉತ್ಸವ ನಿಜಕ್ಕೂ ಅವಿಸ್ಮರಣೀಯ ಅನುಭವ ನೀಡಿತು.
ಶ್ರೀ ಬನಶಂಕರಿ ದೇವಸ್ಥಾನ ಭವ್ಯ ಸಭಾಂಗಣದಲ್ಲಿ ಜರುಗಿದ ವೇದಿಕೆ ಸಮಾರಂಭ ಅತ್ಯಂತ ಅರ್ಥಪೂರ್ಣವಾಗಿ ದಾಸಿಮಯ್ಯನವರ ಚಿಂತನೆ, ಆಲೋಚನೆಗಳ ಕೇಂದ್ರವಾಗಿ ಮಾರ್ಪಟ್ಟಿತ್ತು, ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಅವರ ಬದುಕಿನ ಪಯಣವನ್ನು ಗಜಾನನ ಗುಂಜೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗುಳೇದಗುಡ್ಡ ಪಟ್ಟಸಾಲಿ ಗುರುಮಠದ ಪರಮ ಪೂಜ್ಯ ಶ್ರೀ ಬಸವರಾಜ ಪಟ್ಟದಾರ್ಯ ಮಹಾ ಸ್ವಾಮಿಗಳು ಮಾತನಾಡುತ್ತಾ ದೇವರ ದಾಸಿಮಯ್ಯನವರ ವಿಚಾರಧಾರೆ ಇಂದಿನ ಕಾಲದಲ್ಲೂ ಪ್ರಸ್ತುತವಾಗಿವೆ. ನೇಯ್ಗೆ ಕಾಯಕ ಮಾಡಿಕೊಂಡು ವಚನಸಾಹಿತ್ಯ ರಚಿಸಿ, ಬಸವಾದಿ ಶರಣರಿಂದ ವಚನ ಸಾಹಿತ್ಯದ ಪಿತಾಮಹ ಎನಿಸಿಕೊಂಡು ಜನಸಾಮಾನ್ಯರ ಬದುಕಿಗೆ ಬೆಳಕು ನೀಡಿದ ಮಹಾ ಸಂತನ ಮೌಲ್ಯಗಳನ್ನೂ ಯುವ ಪೀಳಿಗೆಗೆ ಪರಿಚಯಿಸುವ ಬಹು ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು, ಶ್ರೀ ಗಳು ನೆರೆದಿದ್ದ ಭಕ್ತರ ಮನಗೆದ್ದರು…
ಸಮಾರಂಭ ಅಧ್ಯಕ್ಷತೆ ವಹಿಸಿದ ಶಾಸಕರಾದ ಅಭಯ ಪಾಟೀಲ ಬೆಳಗಾವಿ ನಗರದ ಪ್ರಮುಖ ರಸ್ತೆಗೆ ದಾಸಿಮಯ್ಯನವರ ಹೆಸರನ್ನು ಇಡುತ್ತೇವೆ. ನೇಕಾರ ಸಂತ ವೃತ್ತ ಮಾಡುತ್ತೇನೆ,ಬರುವ ವರ್ಷ ನೇಕಾರ ಸಮಾಜದವರನ್ನು ಬೆಳಗಾವಿ ಮಾಹಾಪೌರರನ್ನಾಗಿ ಮಾಡುತ್ತೇವೆ ಎನ್ನುವ ಭರವಸೆಯನ್ನು ನೀಡಿದರು.
ಒಟ್ಟಾರೆ ಒಂದು ಸಮಾರಂಭಕ್ಕೆ ಸಾವಿರಾರು ಜನತೆ ಸಾಕ್ಷಿಯಾಯಿತು…