ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ಸ್ಥಾಪನೆಗೊಳ್ಳಿರುವ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರರ ಮೂರ್ತಿಯ ಮೆರವಣಿಗೆಗೆ ಬೆಳಗಾವಿಯಿಂದ ಅದ್ಧೂರಿ ಚಾಲನೆ ದೊರೆಯಿತು.

ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರರ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆ ಇಂದು ಬೆಳಗಾವಿಯ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನದಿಂದ ನೂತನ ಮೂರ್ತಿಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ದಲಿತ ಮುಖಂಡರಾದ ಮಲ್ಲೇಶ್ ಚೌಗಲೆ, ಯಾದವ ಕಾಂಬಳೆ, ಯಲ್ಲಪ್ಪ ಕೋಲಕಾರ, ಸಿಪಿಐ ಧರ್ಮಣ್ಣವರ, ಪಿ.ಎಸ್.ಐ ಪರಸಣ್ಣವರ, ಸಿದ್ಧಪ್ಪಾ ಕಾಂಬಳೆ, ದೀಪಕ ಮೇತ್ರಿ, ಗಡಿನಾಯ್ಕ ಸೇರಿದಂತೆ ಇನ್ನುಳಿದವ ಉಪಸ್ಥಿತಿಯಲ್ಲಿ ಬುದ್ಧ ವಂದನಾ ಮೂಲಕ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆಯನ್ನು ನೀಡಲಾಯಿತು.
ಇನ್ನು ದಲಿತ ಸಮಾಜದ ವತಿಯಿಂದ ಬಾಬಾಸಾಹೇಬರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಈ 7 ಅಡಿ ಎತ್ತರ ಮೂರ್ತಿಯನ್ನು ತಯಾರಿಸಲಾಗಿದೆ. ಏಪ್ರೀಲ್ 12 ರಂದು ಬಾಬಾಸಾಹೇಬರ ಮೂರ್ತಿಯ ಅನಾವರಣ ಕಾರ್ಯಕ್ರಮ ಹಾಗೂ 14 ರಂದು ಜಯಂತ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಗಜಾನನ ಕೋರೆ ಇನ್ ನ್ಯೂಸ್’ಗೆ ಮಾಹಿತಿಯನ್ನು ನೀಡಿದರು. ಬೈಟ್
ಈ ಸಂದರ್ಭದಲ್ಲಿ ಅಂಬೇಡ್ಕರರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.