Belagavi

ಪಾರ್ಟಿ ಮಾಡಲು ಕುರಿ ನೀಡದ ಕುರಿಗಾಹಿಗಳ ಮೇಲೆ ಮಾರಣಾಂತಿಕ ಹಲ್ಲೆ…

Share

ಪಾರ್ಟಿ ಮಾಡಲು ಕುರಿ ಕೊಡದ ಕುರಿಗಾಯಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿಯ ಮಜಗಾಂವ ಹೊರವಲಯದಲ್ಲಿ ನಡೆದಿದೆ.

ಇತ್ತಿಚೆಗೆ ಕುರಿಗಳ ಕಳ್ಳತನದ ಪ್ರಕರಣಗಳು ಹೆಚ್ಚಾಗಿವೆ. ಈಗಾಗಲೇ ರಾಜ್ಯದಲ್ಲಿ ಓರ್ವ ಕುರಿಗಾಹಿಯನ್ನು ಕೊಲೆ ಮಾಡಲಾಗಿದೆ. ಇನ್ನೊಂದೆಡೆ ಓರ್ವ ಕುರಿಗಾಯಿಯ ಕಾಲನ್ನೇ ಕತ್ತರಿಸಲಾಗಿದೆ. ನಿನ್ನೆ ಬೆಳಗಾವಿಯ ಮಜಗಾಂವ ಹೊರವಲಯದ ಜಮೀನಿನಲ್ಲಿದ್ದ ಕುರಿಗಾಹಿಗಳ ಬಳಿ ಬಂದ ಕುರಿಗಳ್ಳರ ಗ್ಯಾಂಗ್ ಪಾರ್ಟಿ ಮಾಡಲು ಕುರಿ ಬೇಡಿದ್ದಾರೆ. ಕೊಡುವುದಿಲ್ಲವೆಂದ ಮಾತ್ರಕ್ಕೆ ಮೂವರು ಕುರಿಗಾರರ ಮೇಲೆ ಹಲ್ಲೆ ಏಳು ಜನ ದುಷ್ಕರ್ಮಿಗಳು ಹಲ್ಲೆಗೈದು ಪರಾರಿಯಾಗಿದ್ದಾರೆ,

ಹಲ್ಲೆಯಲ್ಲಿ ಆನಂದ ಕಲ್ಲೊಳ್ಳರ್, ಯಲ್ಲಪ್ಪ ಕಲ್ಲೊಳ್ಕರ್, ಗಂಗಾರಾಮ್ ಬೆಳಗಾಂವಕರ್ ಎಂಬುವವರ ಕಣ್ಣು, ಕೈ,ಹೊಟ್ಟೆ, ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ.ಗಾಯಾಳುಗಳಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:

error: Content is protected !!