Belagavi

ನೆರೆ ರಾಜ್ಯದಿಂದ ಬೆಳಗಾವಿ ಗಡಿಭಾಗಕ್ಕೆ ಮದ್ಯ ಮಾರಾಟವಾಗದಂತೆ ಕ್ರಮವಹಿಸಿ…

Share

ಚಿಲ್ಲರೇ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ, 20 ರಷ್ಟು ಲಾಭಾಂಶವನ್ನು ನೀಡಬೇಕು. ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆಗೊಳಿಸಬೇಕೆಂದು ಒತ್ತಾಯಿಸಿ ಇಂದು ಬೆಳಗಾವಿಯ ಸನ್ನದ್ದುದಾರ ಮದ್ಯ ಮಾರಾಟಗಾರರಿಂದ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಬೆಳಗಾವಿಯ ಸನ್ನದ್ದುದಾರ ಮದ್ಯ ಮಾರಾಟಗಾರರು ರಾಜ್ಯದಲ್ಲಿ ಮದ್ದಯದ ಮೇಲಿನ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸಬೇಕು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಬೆಳಗಾವಿ ಲೀಕರ್ ಮರ್ಚ್ಂಟ್ ಅಸೋಸಿಯೇಷನನ ಅಧ್ಯಕ್ಷರಾದ ಗಣೇಶ ಹಲಗೆಕರ ಅವರು ಉತ್ಪನ್ನಗಳ ಮಾರಾಟ ದರ ಮೊದಲೂ ಶೇ. 20 ರಷ್ಟಿತ್ತು. ಅದನ್ನು ಸರ್ಕಾರ ಕಡಿತಗೊಳಿಸಿ, ಶೇ. 10 ಕ್ಕೆ ಇಳಿಸಿದೆ. ಇದರಿಂದಾಗಿ ಲೀಕರ್ ಮರ್ಚಂಟಗಳಿಗೆ ನಷ್ಟಯುಂಟಾಗುತ್ತಿದೆ. ಅಲ್ಲದೇ ವೈನ್ಸಗಳಲ್ಲಿ ಸ್ನಾಕ್ಸ್ ಬಾರಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು. ಅಲ್ಲದೇ ಬಾರಗಳಿಗೂ ಪಾರ್ಸೆಲ್ ಸರ್ವಿಸ್ ನೀಡಲು ಅನುಮತಿ ನೀಡಬೇಕು. ಗೋವಾದಿಂದ ಬರುವ ಮದ್ಯದಿಂದಾಗಿ ಕರ್ನಾಟಕ ರಾಜ್ಯದ ಲೀಕರ್ ವ್ಯಾಪಾರಿಗಳಿಗೆ ಹೊಡೆತ ಬೀಳುತ್ತಿದೆ ಎಂದರು. ಬೆಳಗಾವಿ ಗಡಿಭಾಗವಾಗಿದ್ದು, ಮಹಾರಾಷ್ಟ್ರದಲ್ಲಿ ಲೀಕರ್ ದರ ಕಡಿಮೆಯಿದೆ. ರಾಜ್ಯದಲ್ಲಿ ಹೆಚ್ಚಾಗಿದೆ. ಇದರಿಂದಾಗಿ ತೊಂದರೆಯಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮುರಳೀಧರ ಜಾಧವ್, ರಮೇಶ್ ಕಳಸಣ್ಣವರ, ಉದಯ ಸಿಂಗೆ, ಶಂಕರ ಹೆಗಡೆ, ರಾಜು ಬೊರಗೇರಿ, ಸೌಂದಲಗೆ, ಆನಂದ ಚವ್ಹಾಣ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.

Tags:

error: Content is protected !!