Belagavi

ಕೆ.ಎಲ್.ಇ ಫ್ಯಾಷನ್ ಡಿಸೈನಿಂಗ್’ನಿಂದ ಫ್ಯಾಷನ್ ಶೋ…

Share

ಇದು ಫ್ಯಾಷನ್’ನ ಜಲ್ವಾ… ಹೊಸ ಹೊಸ ಡಿಸೈನ್ ಹೊಸ ಹೊಸ ತರಹದ ಬಟ್ಟೆಗಳನ್ನು ಧರಿಸುವುದು ಈ ಯುಗದ ನಿಯಮವೆಂದರೇ ತಪ್ಪಾಗಲಾರದು. ಇನ್ನು ಈ ಯುಗಕ್ಕೆ ಬೇಕಾದ ಹೊಸ ಹೊಸ ಬಟ್ಟೆಗಳನ್ನು ನಮ್ಮ ಬೆಳಗಾವಿ ಕೆ.ಎಲ್.ಇ. ಫ್ಯಾಷನ್ ಡಿಸೈನಿಂಗ್’ನ ವಿದ್ಯಾರ್ಥಿಗಳು ವಿನ್ಯಾಸಪಡಿಸಿದ್ದು, ಫ್ಯಾಷನ್ ಶೋ ಮೂಲಕ ಜನಮಾನಸಕ್ಕೆ ತಂದಿದ್ದಾರೆ.

ಬೆಳಗಾವಿಯ ನೆಹರು ನಗರದ ಕೆಎಲ್ಇ ಫ್ಯಾಷನ್ ಡಿಸೈನಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜೀರಗೆ ಸಭಾಂಗಣದಲ್ಲಿ ಗುರುವಾರ ಕ್ಯಾಟ್ ವಾಕ್ ನಡೆಸಿ ನೋಡಗರ ಗಮನ ಸೆಳೆದರು. ಹೌದು. ಕೆಎಲ್ಇ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಉಡುಪು ಧರೆಸಿ ಕ್ಯಾಟ್ ವಾಕ್ ಮಾಡಿದ್ದು ನೋಡುಗರ ಗಮನ ಸೆಳೆಯಿತು

ಈ ಸಂದರ್ಭದಲ್ಲಿ ಮಾತನಾಡಿದ ಶಬ್ನಮ್ ಅತ್ತಾರ, ಕೆಎಲ್ಇ ಫ್ಯಾಶನ್ ಡಿಸೈನ್ ಕೊನೆಯ ವರ್ಷದ ವಿದ್ಯಾರ್ಥಿಗಳು ಪ್ರತಿ ವರ್ಷ ಕ್ಯಾಟ್ ವಾಕ್ ಆಯೋಜನೆ ಮಾಡುತ್ತೇವೆ ಎಂದರು.ಕೆಎಲ್ಇ ಪ್ಯಾಶನ್ ಡಿಸೈನ್ ವಿದ್ಯಾರ್ಥಿಗಳ ಮನರಂಜನೆಗಾಗಿ ಪ್ರತಿ ವರ್ಷ ಕ್ಯಾಟ್ ವಾಕ್ ಆಯೋಜನೆ ಮಾಡಿರುತ್ತೇವೆ. ಇದರಿಂದ ವಿದ್ಯಾರ್ಥಿಗಳಿಗೆ ಆತ್ಮಸ್ಥೈಯ ತುಂಬುವ ಕೆಲಸ ಮಾಡುತ್ತೇವೆ ಎಂದರು.

ಇನ್ನು ವೈಷ್ಣವಿ ಅವರು ಮಾತನಾಡಿ, ನಾನು ಡೆವಿಲ್ ಕ್ಯಾಟ್ ವಾಕ್ ಮಾಡಿದೆ. ಜೀವನದಲ್ಲಿ ಒಳ್ಳೆಯದು ಇರಬೇಕು. ಕೆಟ್ಟದ್ದು ಇರಬೇಕು. ಏಂಜಲ್ ವಾಕ್ ಎಲ್ಲರಿಗೂ ಅಚ್ಚು ಮೆಚ್ಚಿನ ವಾಕ್ ಅದೇ ರೀತಿ ಡೆವಿಲ್‌ ವಾಕ್ ಸಹ ಕೆಲವರಿಗೆ ಇಷ್ಟವಾಗುತ್ತದೆ ಎಂದರು.

ಅದೇ ರೀತಿ ರೋಹಿಣಿ ಮಾತನಾಡಿ, ಕೆಎಲ್ಇ ಪ್ಯಾಶನ್ ಡಿಸೈನ್ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ನಾನು ಇಂದಿನ ಕ್ಯಾಟ್ ವಾಕ್ ನಲ್ಲಿ ವಿಠ್ಠಲ್, ರುಕ್ಮಿಣಿ ಪಾತ್ರ ವಹಿಸಿದ್ದು ಖುಷಿ ಕೊಟ್ಟಿದೆ ಎಂದರು. ಕೆಎಲ್ಇ ಸಂಸ್ಥೆ ಆಟ, ಪಾಠದ ಜೊತೆಗೆ ಮನರಂಜನೆಯಲ್ಲಿ ನಮ್ಮ ಕಲೆ ಸಂಸ್ಕೃತಿಯ ಬಗ್ಗೆಯೂ ಕಲಿಸಿ ಕೊಡುತ್ತಿರುವುದು ಸಂತಸ ತಂದಿದೆ ಎಂದರು‌.

ಇನ್ನೂರಕ್ಕೂ ಅಧಿಕ ಪುರುಷ, ಮಹಿಳಾ ಮತ್ತು ಕಿಡ್ಸ್ ಮಾಡೆಲ್ಸ್’ಗಳು ಈ ಫ್ಯಾಷನ್’ದಲ್ಲಿ ಭಾಗಿಯಾಗಿದ್ದರು.

Tags:

error: Content is protected !!