Belagavi

ಕಲಾ ಮಂದಿರಕ್ಕೆ ನೂತನ ರೂಪ…

Share

ಕೊನೆಗೂ ಬೆಳಗಾವಿಗರ ಬಹುಪ್ರತೀಕ್ಷಿತ ನೂತನವಾಗಿ ಮಾರ್ಡನ್ ಮಾರ್ಕೆಟಾಗಿ ರೂಪುಗೊಂಡ ಕಲಾಮಂದಿರದ ಲೋಕಾರ್ಪಣೆಗೆ ಮೂಹೂರ್ತ ಫಿಕ್ಸ್ ಆಗಿದೆ.

ಹೌದು, ಬೆಳಗಾವಿ ಟಿಳಕವಾಡಿಯಲ್ಲಿರುವ ಕಲಾಮಂದಿರಕ್ಕೆ ಹೊಸ ರೂಪವನ್ನು ನೀಡಲಾಗಿದ್ದು, ಮಾರ್ಡನ್ ಮಾರ್ಕೆಟಾಗಿ ಕಲಾಮಂದಿರ ಪರಿವರ್ತನೆಗೊಂಡಿದೆ. ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ನಿರ್ಮಾಣ ಕಾರ್ಯ ಮುಗಿದಿದ್ದು, ಕೊನೆಗೂ ಲೋಕಾರ್ಪಣೆಗೆ ಮೂಹೂರ್ತ ಫಿಕ್ಸ್ ಆಗಿದೆ. ಇದೇ ಏಪ್ರೀಲ್ 20 ರಂದು ಬೆಳಿಗ್ಗೆ 11:30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

ಹಳೆಯ ಕಲಾಮಂದಿರವನ್ನು ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್‌ಗೆ ಹಸ್ತಾಂತರಿಸಿದ ಬಳಿಕ ಮೇ 27, 2019 ರಂದು ತೆರುವು ಕಾರ್ಯಾಚರಣೆ ಆರಂಭಗೊಂಡಿತು. ನಂತರ ₹46.68 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಪುನರಾಭಿವೃದ್ಧಿ ಯೋಜನೆಯನ್ನು ಯಾಂಕೀ ಕನ್‌ಸ್ಟ್ರಕ್ಷನ್ ಕಾರ್ಯಗತಗೊಳಿಸಿತು.
ನೆಲಮಹಡಿ, ತಳಮಹಡಿ ಸೇರಿದಂತೆ ಮಲ್ಟಿಪಲ್ ಕಾರ್ ಪಾರ್ಕಿಂಗ್, ವಾಣಿಜ್ಯ ಮಳಿಗೆಗಳು, ತಿನಿಸು ಮಳಿಗೆಗಳು, ಮೀಟಿಂಗ್ ಹಾಲ್. ವ್ಯಾಪಾರ ಸಂಕೀರ್ಣ, ಆಟೋ ರಿಕ್ಷಾ ಮತ್ತು ಸೈಕಲ್’ಗಳಿಗೆ ಮಲ್ಟಿ ಮಾಡೆಲ್ ಪಾರ್ಕಿಂಗ್ ಸ್ಟ್ಯಾಂಡ್, ಆಧುನಿಕ ಮಳಿಗೆಗಳು, ಕೌಟುಂಬಿಕ ಮನೋರಂಜನಾತ್ಮಕ ಚಟುವಟಿಕೆಗಳು, ಲಘು ಸಭಾಗೃಹ, ಸಾಂಸ್ಕೃತಿಕ ಕೇಂದ್ರ ಇನ್ನುಳಿದ ಹತ್ತು ಹಲವಾರು ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ.

Tags:

error: Content is protected !!