ಗುಡ್ ಫ್ರೈಡೆ ಕ್ರೈಸ್ತರಿಗೆ ಅತ್ಯಂತ ಪವಿತ್ರವಾದ ದಿನ. ಇಂದು ಬೆಳಗಾವಿಯ ವಿವಿಧ ಚರ್ಚುಗಳಲ್ಲಿ ಕ್ರೈಸ್ತ ಬಾಂಧವರಿಂದ ಗುಡ್ ಫ್ರೈಡೆಯನ್ನು ಆಚರಿಸಲಾಯಿತು. ತಮ್ಮ ತಪ್ಪುಗಳನ್ನು ಕ್ಷಮಿಸಿ, ಯೇಸು ಕ್ರಿಸ್ತನು ಎಲ್ಲರಿಗೂ ಸುಖ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಲಾಯಿತು.

ಬೆಳಗಾವಿಯ ಮೆಥೋಡಿಸ್ಟ್ ಚರ್ಚಿನಲ್ಲಿ ಕ್ರೈಸ್ತ ಬಾಂಧವರಿಂದ ರೆವ್ಹರೆಂಡ್ ಶಾಂತಪ್ಪ ಅಂಕಲಗಿ ಮತ್ತು ರೆವ್ಹರೆಂಡ್ ಜ್ಹಾನ್ ಹಂಚಿನಮನಿ ಅವರ ನೇತೃತ್ವದಲ್ಲಿ ಗುಡ್ ಫ್ರೈಡೆಯನ್ನು ಆಚರಿಸಲಾಯಿತು. ಅವರು ಚರ್ಚಿನಲ್ಲಿ ಗುಡ ಫ್ರೈಡೆಯ ಮಹತ್ವವನ್ನು ತಿಳಿಸಿ, ಪ್ರಭು ಯೇಸು ಕ್ರಿಸ್ತನ ತ್ಯಾಗ ಬಲಿದಾನ ಕುರಿತು ಮಾಹಿತಿ ನೀಡಿದರು. ನಂತರ ಸಮೂಹ ಗೀತ ಗಾಯನ ಮತ್ತು ವಿಶ್ವಶಾಂತಿಗಾಗಿ ಪ್ರಾರ್ಥನೆಯನ್ನು ನಡೆಸಲಾಯಿತು.
ಗುಡಫ್ರೈಡೆ ಇದು ಯೇಸು ಕ್ರಿಸ್ತನು ಶಿಲುಬೆಗೆ ಏರಿದ ದಿನ ಈ ಘಟನೆಯು ಕ್ರಿಶ್ಚಿಯನ್ನರಿಗೆ ದೈವಿಕ ಪ್ರೀತಿ ಮತ್ತು ತ್ಯಾಗವನ್ನು ಸಂಕೇತಿಸುತ್ತದೆ. ಕ್ರೈಸ್ತರ ಪ್ರಕಾರ, ಯೇಸು ಮನುಕುಲದ ಒಳಿತಿಗಾಗಿ ಶಿಲುಬೆಗೇರಿ ತನ್ನ ಪ್ರಾಣ ತ್ಯಾಗ ಮಾಡಿದರು. ಯೇಸು ಶಿಲುಬೆಗೇರಿಸಿದ ದಿನವನ್ನು ಗುಡ್ ಫ್ರೈಡೇ ಅಥವಾ ಬ್ಲಾಕ್ ಫ್ರೈಡೇ ಎಂದೂ ಕರೆಯಲಾಗುತ್ತದೆ. ಯೇಸು ಮರಣ ಹೊಂದಿದ ದಿನದಂದು ಕ್ರಿಶ್ಚಿಯನ್ನರು ಉಪವಾಸ ಆಚರಿಸುತ್ತಾ, ದೇವರ ಜಪ- ಪ್ರಾರ್ಥನೆ ಮಾಡುತ್ತಾರೆ. ಈ ದಿನದಂದು ಕ್ರೈಸ್ತರು ಯೇಸು ಹೇಳಿದ ಕೊನೆಯ ಏಳು ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ. ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಕ್ರಿಸ್ತನು ಅನೇಕ ಬೋಧನೆಗಳನ್ನು ಮಾಡಿದ್ದು, ಅವುಗಳಲ್ಲಿ ಪ್ರಮುಖವಾಗಿರುವುದು ನಮ್ಮ ನೆರೆಹೊರೆಯವರನ್ನು ಪ್ರೀತಿಸಿ, ಅವರ ತಪ್ಪುಗಳನ್ನು ಕ್ಷಮಿಸಿ ಎಂಬುದು ಬಹಳ ಪ್ರಮುಖವಾಗಿದೆ ಎಂದು ಮೆಥೋಡಿಸ್ಟ್ ಸೆಂಟ್ರಲ್ ಚರ್ಚಿನ ಪಾಸ್ಟರ್ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.