ಸಿಎಂ ಸಿದ್ದರಾಮಯ್ಯ ಮುಡಾ ಆರೋಪದಿಂದ ಮುಕ್ತರಾಗಲಿ ಎಂದು ಅಭಿಮಾನಿಗಳಿಂದ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.

ಸಿಎಂ ಸಿದ್ಧರಾಮಯ್ಯನವರು ಮುಡಾ ಆರೋಪದಿಂದ ಮುಕ್ತರಾಗಲಿ, ಅವರಿಗೆ ಬಂದ ಎಲ್ಲ ಕಂಟಕ ದೂರ ಆಗಲಿ ಎಂದು ವಿಜಯಪುರ ಜಿಲ್ಲೆ ಯರನಾಳ ಗ್ರಾಮದ ಸಿದ್ದರಾಮಯ್ಯ ಅಭಿಮಾನಿ ಶ್ರೀಶೈಲ್ ವಾಲಿಕಾರ ದೀರ್ಘದಂಡ ಹತ್ತು ಕಿಮೀ ದೀರ್ಘದಂಡ ನಮಸ್ಕಾರವನ್ನು ಹಾಕಲಾಗಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಸಂಗಮ ಕ್ರಾಸ್’ನಿಂದ ಕೂಡಲಸಂಗಮವರೆಗೆ ದೀಡನಮಸ್ಕಾರ ಹಾಕುತ್ತಾ ಮುಂದೆ ಸಾಗಿದ್ದಾರೆ. ಕೂಡಲಸಂಗಮ ತಲುಪಿ ಬಸವಣ್ಣನ ಐಕ್ಯಮಂಟಪ ಹಾಗೂ ಸಂಗಮನಾಥ ದೇಗುಲದಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಲಿದ್ದಾರೆ.