Belagavi

ವಕ್ಫ್ ತಿದ್ದುಪಡಿ ಕಾನೂನು ಜಾರಿಗೆ ಬೆಳಗಾವಿ ಉಲೇಮಾಗಳ ವಿರೋಧ…

Share

ವಕ್ಫ್ ತಿದ್ದುಪಡಿ ಕಾನೂನು 2025 ಅಧಿಕೃತವಾಗಿ ಜಾರಿಯಾಗಿರುವುದನ್ನು ಬೆಳಗಾವಿಯ ಉಲೇಮಾಗಳು ಖಂಡಿಸಿದ್ದು, ಶೀಘ್ರದಲ್ಲೇ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಸಭೆ ಕರೆಬೇಕೆಂದು ಒತ್ತಾಯಿಸಿದೆ.

ಇಂದು ಬೆಳಗಾವಿಯ ದಾರೂಲ್ ಉಲುಮ್ ಬಂದೇ ನವಾಜ್’ನಲ್ಲಿ ಸಭೆಯನ್ನು ಕರೆಯಲಾಗಿತ್ತು. ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ ವಕ್ಫ್ ತಿದ್ದುಪಡಿ ಕಾನೂನು 2025ಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಲಾಯಿತು. ಶೀಘ್ರದಲ್ಲೇ ಅಂಜುಮನ್ ಎ ಇಸ್ಲಾಂ ಸಂಸ್ಥೆಯೂ ಸಭೆಯನ್ನು ಕರೆದು ಈ ಕುರಿತು ಚರ್ಚಿಸಬೇಕೆಂದರು. ಈ ಕುರಿತಾದ ಮನವಿಯನ್ನು ಶಾಸಕ ಆಸೀಫ್ ಸೇಠ್ ಅವರಿಗೆ ಸಲ್ಲಿಸಿದರು. ಈ ಕುರಿತು ಮೌಲಾನಾಗಳು ಮಾಹಿತಿಯನ್ನು ನೀಡಿದರು.

ಮೌಲಾನಾ ನಝೀರುಲ್ಲಾ ಖಾದ್ರಿ, ಮೌಲಾನಾ ಮುಸ್ತಾಕ್ ಮಹ್ಮದ್ ಐಮದ್ ಅಶ್ರಫಿ, ಮೌಲಾನಾ ಸದ್ದಾಮ್ ಅಹ್ಮದ್ ನಯೀಮಿ, ಮೌಲಾನಾ ಶೇರಖಾನ್, ಮೌಲಾನಾ ಅಲ್ಲಾವುದ್ಧಿನ್ ಖಾದ್ರಿ, ನಗರಸೇವಕ ಸಮೀವುಲ್ಲಾ ಮಾಡಿವಾಲೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!