ಬೆಳಗಾವಿ ನಗರದಲ್ಲಿ ಬುಧವಾರ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ ಸಿಇಟಿ ಪರೀಕ್ಷೆ ವಿವಿಧ ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆಯಿತು.

ಸಿಇಟಿ ಪರೀಕ್ಷೆಗಾಗಿ ಇಂದು ಮುಂಜಾನೆಯಿಂದಲೇ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಪಾಲಕರು ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಜಮಾಯಿಸಿದ್ದರು. ಬೆಳಗಾವಿ ನಗರದಲ್ಲಿ ಒಟ್ಟು 21 ಪರೀಕ್ಷಾ ಕೇಂದ್ರಗಳಿದ್ದವು. ಬುಧವಾರ ಮುಂಜಾನೆಯ ಮೊದಲ ಅವಧಿಯಲ್ಲಿ ನಡೆದ ಫಿಸಿಕ್ಸ್ ಪರೀಕ್ಷೆಗೆ 7,436 ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಮಧ್ಯಾಹ್ನ 2ನೇ ಅವಧಿಯಲ್ಲಿ ನಡೆದ ಕೆಮಿಸ್ಟ್ರಿ ಪರೀಕ್ಷೆಗೆ ಒಟ್ಟು 7,430 ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಾಗಿದ್ದರು. ಪಾರದರ್ಶಕ ಹಾಗೂ ಶಿಸ್ತು ಬದ್ಧ ಪರೀಕ್ಷೆ ನಡೆಯಲು ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿತ್ತು ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪರೀಕ್ಷೆಗಳು ಸುಸೂತ್ರ ನಡೆಯಲು ಶ್ರಮಿಸಿದರು