ಬಾಗಲಕೋಟೆಯಿಂದ ಕಾತರಕಿ ಗ್ರಾಮಕ್ಕೆ ತೆರಳಲು ಪ್ರತಿದಿನ ಸಂಜೆ ಹೆಚ್ಚು ಬಸ್ಸುಗಳನ್ನು ಬಿಡಲು ಆಗ್ರಹಿಸಿ ಕಾಲೇಜು ವಿದ್ಯಾರ್ಥಿನಿಯರು ಬಸ್ ತಡೆದು ಪ್ರತಿಭಟಿಸಿದ ಘಟನೆ ನಡೆದಿದೆ

ಕಾತರಕಿ ಗ್ರಾಮಕ್ಕೆ ತೆರಳಲು ಸಂಜೆ ಒಂದೇ ಬಸ್ ಇದ್ದು ಅದೇ ಬಸ್ ಗೆ ಗ್ರಾಮಸ್ಥರು ಮುಗಿ ಬೀಳುತ್ತಾರೆ. ಸಂಜೆ ಕಾಲೇಜು ಮುಗಿಸಿ ಗ್ರಾಮಕ್ಕೆ ತೆರಳಲು ಬರುವ ವಿದ್ಯಾರ್ಥಿನಿಯರು ಬಸ್ ಏರಲು ಹರಸಾಹಸ ಪಡಬೇಕಾಗುತ್ತದೆ, ಒಂದೇ ಬಸ್ ನಲ್ಲಿ 150ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಜೆ ಹೆಚ್ಚುವರಿ ಬಸ್ ಗಳನ್ನು ಬಿಡಬೇಕೆಂದು ಆಗ್ರಹಿಸಿ ವಿದ್ಯಾಗಿರಿ ಸರ್ಕಲ್ ನಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿನಿಯರು ಬಸ್ ತಡೆದು ಪ್ರತಿಭಟನೆ ನಡೆಸಿದರು
ಘಟನೆಯಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಆಗಿತ್ತು. ಇನ್ನಾದರೂ ಸಾರಿಗೆ ಸಂಸ್ಥೆಯವರು ಎಚ್ಚೆತ್ತುಕೊಂಡು ವಿದ್ಯಾರ್ಥಿನಿಯರಿಗಾಗಿ ಹಾಗೂ ಗ್ರಾಮಸ್ಥರಿಗಾಗಿ ಹೆಚ್ಚುವರಿ ಬಸ್ ಬಿಡುತ್ತಾರೆಯೋ ಕಾದು ನೋಡಬೇಕಾಗಿದೆ