ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಮುಂಜಾಗೃತೆ ಕುರಿತು ಅಪರ್ಣಾ ಖಾನೋಲಕರ ಅವರ ನೇತೃತ್ವದ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕವನ್ನು ಸಾದರಪಡಿಸಲಾಯಿತು.

ಸ್ತನ ಕ್ಯಾನ್ಸರ್’ನಿಂದ ಪೀಡಿತ ಜನರ ಮನೋಬಲವನ್ನು ಹೆಚ್ಚಿಸುವ ಕೆಲಸವನ್ನು ಅಪರ್ಣಾ ಖಾನೋಲಕರ ಮತ್ತು ಅವರ ತಂಡವು ಮಾಡುತ್ತಿದೆ. ಇವರ ಈ ತಂಡವನ್ನು ಶಾಂತಾಯಿ ವೃದ್ಧಾಶ್ರಮದ ಕಾರ್ಯಾಧ್ಯಕ್ಷರಾದ ವಿಜಯ್ ಮೋರೆ ಅವರು ಸತ್ಕರಿಸಿರಿ ಪ್ರೋತ್ಸಾಹಿಸಿದರು. ಸ್ತನ ಕ್ಯಾನ್ಸರ್ ರೋಗದಿಂದ ಮುಂಜಾಗೃತೆ ಮತ್ತು ಸ್ತನ ಕ್ಯಾನ್ಸರ್ ಪೀಡಿತರ ಮನೋಬಲವನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತಿರುವ ಪಿಂಕ್ ವಾರಿಯರ್ಸ್ ತಂಡದ ಕಾರ್ಯವನ್ನು ಅವರು ಶ್ಲಾಘಿಸಿದರು.
ವೃದ್ಧಾಶ್ರಮದ ಅಧ್ಯಕ್ಷರಾದ ವಿಜಯ ಪಾಟೀಲ್ ಅವರು ಪಿಂಕ್ ವಾರಿಯರ್ಸ್’ಗಳ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸ್ತನ ಕ್ಯಾನ್ಸರ್ ನಿವಾರಣೆಗೆ ಶ್ರಮಿಸುತ್ತಿರುವ ವೈದ್ಯರು ಮತ್ತು ತಂಡದ ಸನ್ಮಾನವನ್ನು ಆಯೋಜಿಸಲಾಗುವುದು ಎಂದರು. ಅಲ್ಲದೇ, ಪಿಂಕ್ ವಾರಿಯರ್ಸ್ ತಂಡದ ಕಾರ್ಯಕ್ಕೆ ತಮ್ಮ ಸಹಕಾರ್ಯ ಸದಾ ಇರಲಿದೆ ಎಂದರು.