Athani

ಅಥಣಿ : ತಾಯಿ ಮಗನನ್ನು ಕೊಂದು ಕಬ್ಬಿನ ಗದ್ದೆಯಲ್ಲಿ ಶವಗಳನ್ನು ಬಿಸಾಕಿದ ದುಷ್ಕರ್ಮಿಗಳು

Share

ತಾಯಿ ಮಗನನ್ನ ಕೊಂದು ಕಬ್ಬಿಣದ ಗದ್ದೆಯಲ್ಲಿ ಬಿಸಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚಂದ್ರವ್ವ ಅಪ್ಪಾರಾಯ ಇಚೇರಿ (62) ಹಾಗೂ ವಿಠ್ಠಲ್ ಅಪ್ಪಾರಾಯ ಇಚೇರಿ (42) ಮೃತ ದುರ್ದೈವಿಗಳು. ಇಬ್ಬರು ಸಹ ತಮ್ಮದೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದು ಮಧ್ಯಾನ್ಹ ಯಾರೂ ದುರ್ಷ್ಕರ್ಮಿಗಳು ಇಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ. ಇನ್ನೂ ಜೋಡಿ ಕೊಲೆಯಿಂದಾಗಿ ಇಡಿ ಗ್ರಾಮವೆ ಬೆಚ್ಚಿ ಬಿದ್ದಿದ್ದು ಕೊಲೆಗೆ
ನಿಖರವಾದ ಕಾರಣ ತಿಳಿದು ಬಂದಿಲ್ಲಾ.

Tags:

error: Content is protected !!