ಇಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ. ಯಾವ ಸಮುದಾಯವೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಕೈಗಾರಿಕಾ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಸಂಫುಟ ಸಭೆಯಲ್ಲಿ ಎಲ್ಲಾ ಸಮುದಾಯಕ್ಕೂ ಸಮಾಧಾನ ಆಗುವಂತೆ ನಿರ್ಧಾರ ಮಾಡುತ್ತೇವೆ. ತಾಂತ್ರಿಕ ಸಮಸ್ಯೆ ಕಾನೂನಾತ್ಮಕ ತೊಡಕು ಇದೆ.

ಪರಿಹಾರ ಹುಡುಕುವ ಕೆಲಸವನ್ನ ರಾಜ್ಯ ಸರ್ಕಾರ ಮಾಡಬೇಕು. ನೂರಕ್ಕೆ ನೂರರಷ್ಟು ಈ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ಇನ್ನೂ ಜಾತಿಗಣತಿ ವರದಿ ಸಂಪೂರ್ಣವಾಗಿ ಓದಿ ತಿಳಿದುಕೊಂಡಿದ್ದೇನೆ ಯಾವ ಸಮುದಾಯದವರು ಆತಂಕಕ್ಕೆ ಒಳಗಾಗೋದು ಬೇಡ. ಎಲ್ಲೆಲ್ಲಿ ಆತಂಕ ಇದೆ ಒಳ್ಳೆಯದು ಇದೆ ಎಲ್ಲವನ್ನೂ ತಿಳಿಸುತ್ತೇವೆ . ಇಂದು ಎಲ್ಲಾ ಸಮಸ್ಯೆ ಪರಿಹಾರ ಸಿಗುತ್ತೆ ಎಂದರು.