ವಿಜಯಪುರ ಜಿಲ್ಲೆಯ ಕತ್ನಳ್ಳಿಯ ಶ್ರೀ ಗುರು ಚಕ್ರವರ್ತಿಯ ಜಾತ್ರೆ ಪ್ರತಿ ವರ್ಷ ಕೂಡ ವಿಜೃಂಬಣೆಯಿಂದ ನಡೆಯುತ್ತದೆ. ಜಾತ್ರೆಯ ಪ್ರಯುಕ್ತ ಹಲವು ಸಾಮೂಹಿಕ ಮದುವೆಗಳನ್ನು ಮಾಡಲಾಗುತ್ತದೆ. ಇಲ್ಲಿನ ವಿಶೇಷತೆ ಎಂದರೆ ಕಾಲಜ್ಞಾನ ನುಡಿಯುವದು. ಇಲ್ಲಿ ನುಡಿದ ಕಾಲಜ್ಞಾನ ಆಧರಿಸಿಯೇ ತಮ್ಮ ಯೋಜನೆಗಳನ್ನು ಭಕ್ತಾದಿಗಳು ರೂಪಿಸುತ್ತಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಯುಗಾದಿಯ ವೇಳೆ ಸದಾಶಿವ ಮುತ್ಯಾನ ಜಾತ್ರೆ ನಡೆಯಿತು. ವಿಜಯಪುರ ತಾಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ಶ್ರೀಗುರು ಚಕ್ರವರ್ತಿ ಸದಶಿವ ಮುತ್ಯ ನೆಲೆಸಿದ್ದಾನೆ. ಈ ಪವಾಡ ಪುರುಷನ ಜಾತ್ರೆಯನ್ನು ಪ್ರತೀ ವರ್ಷ ಯುಗಾದಿಯ ವೇಳೆ ಒಂದು ವಾರದ ವರೆಗೆ ನಡೆಸಲಾಗುತ್ತದೆ. ಈ ವೇಳೆ ಇಲ್ಲಿನ ಪೀಠಾಧಿಪತಿಗಳಾದ ಶಿವಯ್ಯ ಮಹಾಸ್ವಾಮೀಜಿಗಳು ಮುಂದಿನ ವರ್ಷದ ಭವಿಷ್ಯ ನುಡಿಯುತ್ತಾರೆ. ಹೀಗೆ ಈ ಬಾರಿ ನುಡಿದ ಭವಿಷ್ಯ ಜನಸಾಮಾನ್ಯರನ್ನು ಹಿಡಿದು ರಾಜಕೀಯದ ವರೆಗೂ ಹುಚ್ಚು ಹಿಡಿಸುವಂತಾಗಿದೆ. ಯಾಕಂದ್ರೆ ಇಲ್ಲಿ ನುಡಿದಿದ್ದ ಭವಿಷ್ಯ ಎಂದೂ ಸುಳ್ಳಾಗಿಲ್ಲ ಎಂಬುದು ಅಷ್ಟೇ ನಂಬಿಕೆಯಿದೆ. ಗುರು ಚಕ್ರವರ್ತಿ ಸದಾಶಿವ ಮುತ್ಯಾ ಜಾತ್ರೆಯಲ್ಲಿ ಅಚ್ಚರಿ ಭವಿಷ್ಯವಾಣಿ ಹೊರ ಬಿದ್ದಿದೆ. ಮಠದ ಶಿವಯ್ಯ ಸ್ವಾಮಿಜಿ ಭವಿಷ್ಯ ನುಡಿದಿದ್ದು ಅಕ್ರಾಳ ವಿಕ್ರಾಳ, ಸಮಕಾಲ ವಿರಳ. ಎರಡು ಬಾರಿ ಅಕ್ರಾಳ ವಿಕ್ರಾಳ ಎಂದು ನುಡಿದಿದ್ದಾರೆ.
ಆಕಳು ಕರುವಿಗೆ ಜನ್ಮ ನೀಡುತ್ತದೆ, ಆಕಳು ಹಾಲು ಹಿಂಡುತೈತಿ, ಮತ್ತೆ ನಿಲ್ಲಿಸುತ್ತೇ, ಮುಂದೆ ಹಾಲು ಹಿಂಡುತೈತಿ ಎಂದು ಈ ವರ್ಷದ ಭವಿಷ್ಯವಾಣಿ ನುಡಿದಿದ್ದಾರೆ. ಯುಗಾದಿ ಪಾಡ್ಯಮಿಯಾದ ಎರಡನೇ ದಿನಕ್ಕೆ ಕತ್ನಳ್ಳಿ ಗ್ರಾಮದ ಗುರು ಚಕ್ರವರ್ತಿ ಸದಾಶಿವ ಮುತ್ಯಾ ಮಠದ ಕಾಲಜ್ಞಾನ ನಡೆಸಲಾಗುತ್ತದೆ. ಇನ್ನೂ ಈಮಠದ ಕಾಲ ಜ್ಞಾನ ಸುಳ್ಳಾದ ಇತಿಹಾಸವೇ ಇಲ್ಲ ಎಂದು ಶಾಸಕ ವಿಠಲ ಕಟಕದೊಂಡ ಹಾಗೂ ಮಾಜಿಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಹೇಳಿದರು…