Kagawad

ಕಾಗವಾಡದ ಸದ್ಭಾವನಾ ಫೌಂಡೇಶನ ಮಹಿಳಾ ಮಂಡಳದ ವತಿಯಿಂದ ಅರ್ಥಪೂರ್ಣವಾಗಿ ರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ

Share

ಕಾಗವಾಡ: ಕಾಗವಾಡದ ಸದ್ಭಾವನಾ ಫೌಂಡೇಶನ್ ವತಿಯಿಂದ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಧನೆ ಮಾಡಿದ ಮಹಿಳಾ ಸಾಧಕರಿಗೆ ಹಾಗೂ ಮಹಿಳಾ ಅಧಿಕಾರಿಗಳಿಗೆ ಮತ್ತು ಪಟ್ಟಣ ಪಂಚಾಯಿತಿಯಲ್ಲಿ ಸ್ವಚ್ಛತಾ ಗೊಳಿಸುವ ಮಹಿಳಾ ಸಿಬ್ಬಂದಿಗಳನ್ನು ಒಂದುಗೂಡಿಸಿ ಸನ್ಮಾನಿಸಿ ಅಭಿನಂದಿಸಿದರು.

ರವಿವಾರ ರಂದು ಕಾಗವಾಡದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಕಾಗವಾಡ ತಾಲೂಕಿನ ಸದ್ಭಾವನಾ ಮಂಡಳ ಇವರು 25 ಬೇರೆ-ಬೇರೆ ಮಹಿಳಾ ಮಂಡಳ ಸದಸ್ಯರನ್ನು ಒಂದುಗೂಡಿಸಿ ಅವರಲ್ಲಿ ವಿಶೇಷ ಸಾಧಕರಿಗೆ ಸನ್ಮಾನಿಸಿ ಅಭಿನಂದಿಸಿದರು. ಸದ್ಭಾವನಾ ಫೌಂಡೇಶನ್ ಅಧ್ಯಕ್ಷ ಶ್ರೀಮತಿ ಸುಗಂಧಾ ಪ್ರವೀಣ ಬಿರನಾಳೆ, ಶ್ರೀಮತಿ ಜ್ಯೋತಿ ಶಾಂತಿನಾಥ ಮಾನಗಾಂವೆ, ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ಸುನೀಲ ಐನಾಪುರೆ ಸೇರಿದಂತೆ ಎಲ್ಲ ಸದಸ್ಯರು ಒಂದುಗೂಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಸನ್ಮಾನ ಸಮಾರಂಭದಲ್ಲಿ ಕಾಗವಾಡ ಪಿಎಸ್ಐ ಶ್ರೀಮತಿ ಗಂಗಾ ಬಿರಾದಾರ, ಕಾಗವಾಡ ತಾಲೂಕಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಮತಿ ಪುಷ್ಪಲತಾ ಸುನ್ನದಕಲ್ಲ, ಡಾ. ಶ್ರೀಮತಿ ಸೋನಾಲಿ ವಿಕ್ರಾಂತ ಮಗದುಮ, ಅಮೃತಾ ಸ್ವಪ್ನಿಲ ಪಾಟೀಲ ಇವರನ್ನು ಸನ್ಮಾನಿಸಿದರು. ಕಾಗವಾಡ ಗ್ರಾಮದಲ್ಲಿ ಯುವತಿಯರು ಬೇರೆ-ಬೇರೆ ವಿಷಯಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಒಂದುಗೂಡಿಸಿ ಸನ್ಮಾನಿಸಿದರು. ಇದರಲ್ಲಿ ಕೆಲವರು ವೈದ್ಯ, ಲೆಕ್ಕಾಧಿಕಾರಿಗಳು, ಅಭಿಯಂತರು, ಸಾಮಾಜಿಕ ಕಾರ್ಯಕರ್ತರು, ಶಾಸ್ತ್ರಜ್ಞ ಎಂದು ಸೇವೆ ಸಲ್ಲಿಸುತ್ತಿದ್ದಾರೆ ಅವರನ್ನು ಗುರುತಿಸಿ ಸನ್ಮಾನಿಸಿದರು.

ಇದರಲ್ಲಿ ಡಾ. ಸವಿತಾ ಗಿರೀಶ ಪಾಟೀಲ, ನ್ಯಾಯವಾದಿ ಶ್ರೀಮತಿ ಶೈಲಾ ಮಹೇಶ ಚೌಗುಲಾ, ಡಾ. ದೀಪಾಲಿ ಶಿರಗಾಂವೆ, ಶಾಸ್ತ್ರಜ್ಞ ಡಾ. ವರ್ಷಾ ಪವಾರ, ಶ್ರೀಮತಿ ರುಕ್ಸಾನಾ ಶೇಖ್, ಶ್ರೀಮತಿ ಸಾಧನಾ ಕಲಗೌಡ ಪಾಟೀಲ, ಸಿಎ ಶ್ರೀಮತಿ ರಾಜಶ್ರೀ ಬಿಂದಗೆ, ಡಾ. ದೀಪಾಲಿ ಅಮೂಲ ಖೋತ, ಶ್ರೀಮತಿ ಸಂಗೀತಾ ಮಾಳಗಿ, ಕಾಗವಾಡ ಪಟ್ಟಣ ಪಂಚಾಯಿತಿಯ ಸ್ವಚ್ಛತಾ ಕಾರ್ಮಿಕ ಶ್ರೀಮತಿ ನೀಲಾಬಾಯಿ ಕಾಂಬಳೆ ಸೇರಿದಂತೆ ಅನೇಕ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಕಾಗವಾಡ ತಾಲೂಕಿನ ಸಮುದಾಯ ಕೇಂದ್ರದ ವೈದ್ಯಾಧಿಕಾರಿಗಳಾದ ಪುಷ್ಪಲತಾ ಸುನ್ನದಕಲ್ಲ ಇವರು ಮಾತನಾಡಿ, ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾಗವಾಡದ ಸದ್ಭಾವನಾ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಸಮಾರಂಭ ಒಂದು ಮಾದರಿಯವಾಗಿದೆ, ನಾರಿ ಶಕ್ತಿಗೆ ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ, ಕೆಲಕಡೆ ಸ್ತ್ರೀ ಭ್ರೂಣ ಹತ್ಯೆ ನಡೆಯುತ್ತಿರುವಾಗ ಇಲ್ಲಿಯ ಮಹಿಳಾ ಸಂಸ್ಥೆ ಕೈಗೊಂಡ ಯೋಜನೆ ಅಭಿನಂದಿಸಲಾಗುತ್ತಿದೆ.
ಇದೇ ರೀತಿ ಮಿರಜದ ಖ್ಯಾತ ವೈದ್ಯರಾದ ಡಾ. ಸೋನಾಲಿ ವಿಕ್ರಾಂತ ಮಗದುಮ ಇವರು ಕೈಗೊಂಡ ಈ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು. ಸನ್ಮಾನ ಸ್ವೀಕರಿಸಿದ ದೀಪಾಲಿ ಶಿರಗಾಂವೆ ಇವರು ಆನಂದ ಭರಿತರಾಗಿ ಕಣ್ಣೀರಿಟ್ಟರು.

ಮಹಾರಾಷ್ಟ್ರದ ಝಿ ಮರಾಠಿ ನಟ ವೃಷಭ ಅಕಿವಾಟೆ ಇವರು ಮುನೋರಂಜನೆ ಮಾಡುವದೊಂದಿಗೆ ಮಹಿಳಾ ಮಂಡಳ ಕೈಗೊಂಡ ಕಾರ್ಯಕ್ರಮದ ಅಭಿನಂದನೆ ಸಲ್ಲಿಸಿದರು. ಹೋಂ ಮಿನಿಸ್ಟರ ಪೈಠಣಿ ಹಂಚುವ ಕಾರ್ಯಕ್ರಮ, ಅನೇಕರ ಸಾಧನೆ ಕಂಡು ಅವರನ್ನು ಅಭಿನಂದಿಸಿದರು. ಸದ್ಭಾವನಾ ಫೌಂಡೇಶನ ಶ್ರೀಮತಿ ಸುರೇಖಾ ಮಗದುಮ, ಅಲಕಾ ಮೊಳೆ, ಪ್ರಜ್ಞಾ ಚೌಗುಲೆ, ವರುಣ ಚೌಗುಲೆ, ಅರ್ಚನಾ ಮಾಲಗಾಂವೆ, ವೈಶಾಲಿ ಪಾಟೀಲ, ದಿವ್ಯಾ ದರೂರ ಸೇರಿದಂತೆ ಅನೇಕ ಸದಸ್ಯರು ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಿದರು.

ಸುಕುಮಾರ ಬನ್ನೂರೆ,

ಇನ್ ನ್ಯೂಸ್, ಕಾಗವಾಡ.

Tags:

error: Content is protected !!